ಕಡಿಮೆ ತಿನ್ನುವುದರ ಮೂಲಕ ಡಯಟ್ ಮಾಡುವುದು ಒಂದು ವಿಧಾನವಾದರೆ ಅಡುಗೆ ತಯಾರಿಯ ವೇಳೆಯೇ ತೂಕ ಹೆಚ್ಚಿಸುವ ಪದಾರ್ಥಗಳನ್ನು ದೂರವಿಡುವುದು ಇನ್ನೊಂದು ವಿಧ. ಕೆಲವು ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಕಡಿಮೆ ಕ್ಯಾಲರಿಯ ಪದಾರ್ಥಗಳನ್ನು ನೀವು ತಯಾರಿಸಬಹುದು.
ಮಾಂಸದ ಅಡುಗೆ ಮಾಡುವಾಗ ನೀವು ಮಾಂಸವನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಡಿ. ಇದರಿಂದ ಮಾಂಸ ಎಳೆ ಎಳೆಯಾಗಿ ಸಿಗುತ್ತದೆ ಹಾಗೂ ರುಚಿಯೂ ಹೆಚ್ಚುತ್ತದೆ. ಬೆಂದ ಬಳಿಕ ಮೃದುವಾಗುವ ಮಾಂಸದ ಅಡುಗೆ ತಯಾರಿಗೆ ಹೆಚ್ಚು ಎಣ್ಣೆಯನ್ನೂ ಬಳಸಬೇಕಿಲ್ಲ.
ಫಿಶ್ ಫ್ರೈ ಮಾಡುವ ಬದಲು ನೇರವಾಗಿ ಬೆಂಕಿಗೆ ಹಿಡಿದು ಗ್ರಿಲ್ ಮಾಡುವುದು ಒಳ್ಳೆಯದು. ಫ್ರೈ ಮಾಡಿದಾಗ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಕೊಬ್ಬು ನಾಶವಾಗುತ್ತದೆ.
ತರಕಾರಿ ಬೇಯಿಸುವಾಗ ಅದು ಬೇಗ ಬೇಯಲೆಂದು ಆಲಿವ್ ಆಯಿಲ್ ಒಂದು ಚಮಚ ಸೇರಿಸಿ ನೋಡಿ. ತರಕಾರಿಗಳನ್ನು ಉದ್ದಕ್ಕೆ ಸ್ಲೈಸ್ ಮಾಡಿದರೆ ಅದು ಬಹುಬೇಗ ಬೇಯುತ್ತದೆ. ಅನ್ನ ತಯಾರಿಸುವಾಗ ಸ್ಟೀಮಿಂಗ್ ನಲ್ಲೇ ಬೇಯಿಸಿ.