ಉತ್ತರ ಪ್ರದೇಶ : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಜ.22 ರಂದು ರಾಮಮಂದಿರ ಉದ್ಘಾಟನೆಯಾಗಲಿದ್ದು, ಈ ಐತಿಹಾಸಿಕ ಕ್ಷಣಗಳಿಗಾಗಿ ಇಡೀ ವಿಶ್ವವೇ ಕಾಯುತ್ತಿದೆ.
ಇದೀಗ ‘ಶ್ರೀ ರಾಮಲಲ್ಲಾ ಮೂರ್ತಿ’ ಅಭಿಷೇಕಕ್ಕಾಗಿ ನೇಪಾಳದ 16 ನದಿಗಳ ಜಲವನ್ನು ಸಂಗ್ರಹಿಸಿ ತರಲಾಗಿದೆ. ನೇಪಾಳದಲ್ಲಿರುವ ಶ್ರೀರಾಮನ ಭಕ್ತರು ರಾಮಲಲ್ಲಾ ಮೂರ್ತಿ ಅಭಿಷೇಕಕ್ಕೆ 16 ನದಿಗಳ ಜಲವನ್ನು ಸಂಗ್ರಹಿಸಿ ತಂದು ಶ್ರೀರಾಮ ಟ್ರಸ್ಟ್ ಗೆ ಒಪ್ಪಿಸಿದ್ದಾರೆ. ಜ.22 ರಂದು ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಟಾಪನೆಯಾಗಲಿದ್ದು, ನಂತರ 16 ನದಿಗಳ ಜಲದಿಂದ ಶ್ರೀರಾಮನ ಮೂರ್ತಿಗೆ ಅಭಿಷೇಕ ಮಾಡಲಾಗುತ್ತದೆ.
ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ರಾಮ ಮಂದಿರದಲ್ಲಿ 2024 ರ ಜನವರಿ 22 ರಂದು ಭಗವಾನ್ ರಾಮಲಲ್ಲಾ ಪ್ರತಿಷ್ಠಾಪನೆಗೆ ಪ್ರಮುಖ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಹಳ್ಳಿ ಹಳ್ಳಿಗಳಲ್ಲೂ ಅಯೋಧ್ಯೆ ರಾಮಮಂದಿರ ಉದ್ಘಾಟನೆಯನ್ನು ನೇರ ಪ್ರಸಾರ ಮಾಡಲು ಸರ್ಕಾರ ಸಿದ್ದತೆ ನಡೆಸಿದ್ದು, ಮನೆ ಮನೆಗಳಲ್ಲೂ ದೀಪಾವಳಿ ಆಚರಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.