ಗದಗ : ಮೆಣಸಿನಕಾಯಿ ಕದ್ದ ಕಳ್ಳರಿಗೆ ಮೆಣಸಿನಕಾಯಿ ತಿನ್ನಿಸಿ ಜನರು ಥಳಿಸಿದ ಘಟನೆ ಗದಗದಲ್ಲಿ ನಡೆದಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೆಣಸಿನ ಕಾಯಿ ಕದ್ದ . ಶಿವಣ್ಣ ಅಂಗಡಿ ಹಾಗೂ ಮಂಜುನಾಥ ಗೌಡರನ್ನು ಥಳಿಸಿದ ಜನರು ಮೆಣಸಿನಕಾಯಿ ತಿನ್ನುವಂತೆ ಒತ್ತಾಯಿಸಿದ್ದಾರೆ.
ಇಬ್ಬರು ಮೆಣಸಿನಕಾಯಿಯನ್ನು ಕದ್ದಿರುವ ವಿಚಾರ ತಿಳಿದ ಗ್ರಾಮಸ್ಥರು ಅವರಿಬ್ಬರನ್ನು ಹಿಡಿದು, ಕದ್ದ ಮೆಣಸಿನಕಾಯಿ ಮೂಟೆಯನ್ನು ಹೊರಿಸಿ, ಊರಲ್ಲಿ ಮೆರವಣಿಗೆ ಮಾಡಿದ್ದಾರೆ. ಅಲ್ಲದೇ ಇಬ್ಬರಿಗೆ ಧರ್ಮದೇಟು ನೀಡಿ ಕಂಬಕ್ಕೆ ಕಟ್ಟಿ ಹಾಕಿ ಕಟ್ಟಿ ಹಾಕಿ ಥಳಿಸಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗ್ರಾಮಸ್ಥರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.