
ಶ್ರೇಷ್ಠ ಅಭಿನಯದ ‘ಸೋಮು ಸೌಂಡ್ ಇಂಜಿನಿಯರ್’ ಚಿತ್ರ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ರಾಜ್ಯದಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ‘ಸೋಮು ಸೌಂಡ್ ಇಂಜಿನಿಯರ್’ ಚಿತ್ರತಂಡ ಇಂದು ವಿಡಿಯೋ ಹಾಡೊಂದನ್ನು ಬಿಡುಗಡೆ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
ಈ ಚಿತ್ರದಲ್ಲಿ ಶ್ರೇಷ್ಠ ಸೇರಿದಂತೆ ನಿವಿಷ್ಕಾ ಪಾಟೀಲ್, ಜಹಾಂಗೀರ್, ಗಿರೀಶ್ ಜಟ್ಟಿ, ಯಶ್ ಶೆಟ್ಟಿ, ಅಪೂರ್ವ, ಚಂದನ ಗೌಡ ತೆರೆ ಹಂಚಿಕೊಂಡಿದ್ದಾರೆ. ಕ್ರಿಸ್ತೋಪರ್ ಕಿನಿ ನಿರ್ಮಾಣ ಮಾಡಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ. ದೀಪು ಎಸ್ ಕುಮಾರ್ ಸಂಕಲನ, ಶಿವ ಸೇನಾ ಛಾಯಾಗ್ರಹಣವಿದೆ. ವಿನೋದ್ ಹಾಗೂ ಜಾಲಿ ಬಸ್ಟಿನ್ ಸಾಹಸ ನಿರ್ದೇಶನ, ಮಾಸ್ತಿ ಮತ್ತು ಅಭಿ ಡೈಲಾಗ್ ಬರೆದಿದ್ದಾರೆ.