
ಅಭಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಸೋಮು ಸೌಂಡ್ ಇಂಜಿನಿಯರ್’ ಚಿತ್ರ ತನ್ನ ಟೀಸರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಮುಂದಿನ ತಿಂಗಳು ಮಾರ್ಚ್ 15 ರಂದು ರಾಜ್ಯದಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ವಿಡಿಯೋ ಹಾಡನ್ನು ಫೆಬ್ರವರಿ 23ಕ್ಕೆ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಇಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
ಈ ಚಿತ್ರದಲ್ಲಿ ಶ್ರೇಷ್ಠ ನಾಯಕ ನಟನಾಗಿ ಅಭಿನಯಿಸಿದ್ದು, ನಿವಿಷ್ಕ ಪಾಟೀಲ್, ಜಹಾಂಗೀರ್, ಗಿರೀಶ್ ಜಟ್ಟಿ, ಯಶ್ ಶೆಟ್ಟಿ, ಅಪೂರ್ವ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ.
ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದು, ದೀಪು ಎಸ್ ಕುಮಾರ್ ಸಂಕಲನ, ಶಿವಸೇನಾ ಛಾಯಾಗ್ರಹಣ, ಮಾಸ್ತಿ ಮತ್ತು ಅಭಿ ಸಂಭಾಷಣೆ ಹಾಗೂ ವಿನೋದ್ ಸಾಹಸ ನಿರ್ದೇಶನವಿದೆ.
