ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅಭಿನಯದ ಬಹು ನಿರೀಕ್ಷಿತ ‘grey games’ ಚಿತ್ರದ ‘ಮನಸೇಳಿದೆ’ ಎಂಬ ವಿಡಿಯೋ ಹಾಡು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.
ಫ್ಯಾಮಿಲಿ ಥ್ರಿಲ್ಲರ್ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಗಂಗಾಧರ್ ಸಾಲಿಮಠ್ ರಚಿಸಿ ನಿರ್ದೇಶಿಸಿದ್ದು, ಫಿಲಂಸ್ ಬ್ಯಾನರ್ ನಲ್ಲಿ ಆನಂದ್ ಹೆಚ್ ಮುಗದ್ ನಿರ್ಮಾಣ ಮಾಡಿದ್ದು, ಡೋಲೇಶ್ವರ್ ರಾಜ್ ಸುಂಕು, ಅರವಿಂದ್ ಜೋಶಿ ಮತ್ತು ಸತೀಶ್ ಗ್ರಾಮ್ ಪುರೋಹಿತ್ ಸಹ ನಿರ್ಮಾಪಕರಾಗಿದ್ದಾರೆ.
ವಿಜಯ ರಾಘವೇಂದ್ರ ಸೇರಿದಂತೆ ಶ್ರುತಿ ಪ್ರಕಾಶ್, ಭಾವನ ರಾವ್, ಅಪರ್ಣ ವಸ್ತಾರೆ, ತೆರೆ ಹಂಚಿಕೊಂಡಿದ್ದಾರೆ. ಅಶ್ವಿನ್ ಹೇಮಂತ್ ಸಂಗೀತ ಸಂಯೋಜನೆ ನೀಡಿದ್ದು ವರುಣ್ ಡಿ.ಕೆ ಛಾಯಾಗ್ರಹಣ, ಜಗದೀಶ್ ಎನ್ ಸಂಕಲನವಿದೆ.