ಪ್ರತೀಕ್ ಪ್ರಜೋಶ್ ನಿರ್ದೇಶನದ ಬಹುನಿರೀಕ್ಷಿತ ‘ಚಿಲ್ಲಿ ಚಿಕನ್’ ಚಿತ್ರದ ಬೀದಿ ನಾಯಿ ಎಂಬ ವಿಡಿಯೋ ಹಾಡನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಸಿದ್ದಾರ್ಥ್ ಕೆಎಸ್ ಮತ್ತು ವೀಚೀತ್ ಢಕಲ್ ಧ್ವನಿಯಾಗಿದ್ದು, ಜೋ ಪಣಿಕರ್ ಸಂಗೀತ ಸಂಯೋಜನೆ ನೀಡಿದ್ದಾರೆ. ಮಾರ್ಟಿನ್ ಯೋ ಮತ್ತು ವೀಚೀತ್ ಢಕಲ್ ಸಾಹಿತ್ಯ ಬರೆದಿದ್ದಾರೆ.
ಮೆಟಾ ನೋಯಾ ಸ್ಟುಡಿಯೋಸ್ ಬ್ಯಾನರ್ ನಲ್ಲಿ ದೀಪ್ ಭೀಮ್ ಜಿಯಾನಿ ಮತ್ತು ಸುಧಾ ನಂಬಿಯಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಬಿ.ವಿ.ಶ್ರುಂಗಾ ಸೇರಿದಂತೆ ಬಿಜೌ ತಂಗ್ಜಮ್, ಜಿಂಪಾ ಸಾಂಗ್ಪೋ, ಹರಿಣಿ ಸುಂದರರಾಜನ್, ವಿಕ್ಟರ್ ತೌಡಂ, ನಿತ್ಯಶ್ರೀ, ಪದ್ಮಜಾ ರಾವ್ ತಾರಾ ಬಳಗದಲ್ಲಿದ್ದಾರೆ. ಆಶಿಶ್ ಕುಸುಗೋಳಿ ಸಂಕಲನ, ತ್ರಿಲೋಕ ತ್ರಿವಿಕ್ರಮ ಅವರ ಸಂಭಾಷಣೆ, ಮತ್ತು ಶ್ರೀಶ್ ಛಾಯಾಗ್ರಹಣವಿದೆ.