
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ಎದುರು 20 ರನ್ ಗಳಿಂದ ಭರ್ಜರಿ ಜಯ ಸಾಧಿಸಿದೆ. ನಿನ್ನೆಯ ಪಂದ್ಯದಲ್ಲಿ ಎಂ ಎಸ್ ಧೋನಿ ಬ್ಯಾಟಿಂಗ್ ನೋಡಲು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಮನರಂಜನೆಯ ರಸದೌತಣವೆ ಸಿಕ್ಕಿದೆ.
ಕೊನೆಯ ಓವರ್ ನಲ್ಲಿ 4 ಎಸೆತಗಳಿದ್ದಾಗ ಬ್ಯಾಟಿಂಗ್ ಮಾಡಲು ಬಂದ ಎಸ್ ಧೋನಿ ಸತತ ಮೂರು ಸಿಕ್ಸರ್ ಗಳನ್ನು ಸಿಡಿಸುವ ಮೂಲಕ 200 ರನ್ಗಳ ಗಡಿ ಮುಟ್ಟಲು ಸಹಕಾರಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮಾಡಿದ ಕೊನೆಯ ಓವರ್ ನಲ್ಲಿ ನಾಲ್ಕು ಎಸೆತಗಳಲ್ಲಿ 20 ರನ್ ಬಾರಿಸಿದ ಎಸ್ ಧೋನಿ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹಲವಾರು ರೀತಿಯ ಕಮೆಂಟ್ ಮಾಡಿದ್ದಾರೆ. 42ನೇ ವಯಸ್ಸಿನಲ್ಲಿಯೂ ಯುವಕರಂತೆ ಬ್ಯಾಟಿಂಗ್ ಮಾಡಿರುವುದನ್ನು ನೋಡಲು ಖುಷಿಯಾಗುತ್ತದೆ ಎಂದಿದ್ದಾರೆ.