ರಾಜ್ಯದಲ್ಲಿ ಭಾರೀ ದೊಡ್ಡ ವಿವಾದಕ್ಕೆ ಗ್ರಾಸವಾಗಿರುವ ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ವಿಚಾರಕ್ಕೆ ಬಹುದೊಡ್ಡ ಟ್ವಿಸ್ಟ್ ದೊರಕಿದೆ. ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ಮಾಡಲು ಸ್ವತಃ ಜಿಲ್ಲಾಧಿಕಾರಿಯೇ ಆದೇಶ ನೀಡಿದ್ದರು ಎಂದು ನಂಜನಗೂಡು ಶಾಸಕ ಹರ್ಷವರ್ಧನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇಲ್ಲಿಯವರೆಗೆ ದೇವಸ್ಥಾನವನ್ನು ಉರುಳಿಸಲು ತಹಶೀಲ್ದಾರ್ ಆದೇಶ ನೀಡಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ನೀಡಿರುವ ಶಾಸಕ ಹರ್ಷವರ್ಧನ್ ದೇವಸ್ಥಾನವನ್ನು ಉಳಿಸಿಕೊಳ್ಳುವ ಸಲುವಾಗಿ ತಹಶೀಲ್ದಾರ್ ಜಿಲ್ಲಾಧಿಕಾರಿಗೆ ಪಾಸಿಟಿವ್ ರಿಪೋರ್ಟ್ನ್ನೇ ನೀಡಿದ್ದರು. ಆದರೆ ಈ ವರದಿಯನ್ನು ನೋಡಿದ ಡಿಸಿಯು ಯಾವ ಆಧಾರದ ಮೇಲೆ ದೇವಸ್ಥಾನವನ್ನು ಉಳಿಸುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು ಅಂತಾ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕೇಳಿದ ಈ ಪ್ರಶ್ನೆಗೆ ತಹಶೀಲ್ದಾರ್ ಬಳಿ ಯಾವುದೇ ಉತ್ತರ ಇರಲಿಲ್ಲ. ಎಲ್ಲಾ ಕಡೆ ದೇವಸ್ಥಾನ ತೆರವು ಮಾಡಲಾಗಿದೆ. ಮಹದೇವಮ್ಮ ದೇವಸ್ಥಾನಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿ ಕೂಡ ಇಲ್ಲ. ಆದ್ದರಿಂದ ಜಿಲ್ಲಾಧಿಕಾರಿಯೇ ದೇವಾಲಯವನ್ನು ತೆರವು ಮಾಡಿ ಎಂದು ಆದೇಶ ನೀಡಿದ್ದಾರೆ. ಗ್ರಾಮ ಠಾಣಾ ಹಾಗೂ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿದ್ದ ಹಿನ್ನೆಲೆಯಲ್ಲಿ 13 ದೇವಸ್ಥಾನಗಳನ್ನು ಉಳಿಸಲಾಯ್ತು. ಮಹದೇವಮ್ಮ ದೇವಸ್ಥಾನ ಉಳಿಸಿ ಎಂದು ತಹಶೀಲ್ದಾರ್ಗೆ ರಿಪೋರ್ಟ್ ಕಳುಹಿಸಿದ್ದೆ. ಅದರಂತೆ ತಹಶೀಲ್ದಾರ್ ಮೋಹನ್ ಕುಮಾರ್ ಡಿಸಿಗೆ ರಿಪೋರ್ಟ್ ನೀಡಿದ್ದರು. ಆದರೆ ಯಾವುದೇ ದಾಖಲಾತಿ ಇಲ್ಲದ ದೇವಸ್ಥಾನವನ್ನು ಹೇಗೆ ಉಳಿಸುತ್ತೀರಾ..? ಎಂದು ಪ್ರಶ್ನಿಸಿ ದೇವಾಲಯ ತೆರವು ಮಾಡಲು ಡಿಸಿ ಆದೇಶ ನೀಡಿದ್ದರು. ಈ ಪ್ರಕರಣದಲ್ಲಿ ತಹಶೀಲ್ದಾರ್ ಮೋಹನ್ ಕುಮಾರಿಯನ್ನು ವರ್ಗಾವಣೆ ಮಾಡಿರುವುದಕ್ಕೆ ನನಗೆ ಬೇಸರವಿದೆ. ಈ ಸಂಬಂಧ ಸಿಎಂ ಜೊತೆ ಮಾತನಾಡುತ್ತೇನೆ ಎಂದು ಹರ್ಷವರ್ಧನ್ ಹೇಳಿದ್ರು.