ಈಗಾಗಲೇ ತನ್ನ ಹಾಡುಗಳ ಮೂಲಕವೇ ಭರ್ಜರಿ ಸೌಂಡ್ ಮಾಡಿರುವ ನವೀನ್ ನಾರಾಯಣಘಟ್ಟ ನಿರ್ದೇಶನದ ಬಹುನಿರೀಕ್ಷಿತ ಮೂರನೇ ಕೃಷ್ಣಪ್ಪ ಚಿತ್ರದ ಟ್ರೈಲರ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ.
ಈ ಚಿತ್ರವನ್ನು ರೆಡ್ ಡ್ರ್ಯಾಗನ್ ಫಿಲಂಸ್ ಬ್ಯಾನರ್ ನಲ್ಲಿ ರವಿಶಂಕರ್ ಮತ್ತು ಮೋಹನ್ ರೆಡ್ಡಿ ನಿರ್ಮಾಣ ಮಾಡಿದ್ದು, ಸಂಪತ್ ಮೈತ್ರಿಯ ಸೇರಿದಂತೆ ರಂಗಾಯಣ ರಘು, ಶ್ರೀಪ್ರಿಯಾ, ಅರೋಹಿ, ತುಕಾಲಿ ಸಂತೋಷ್, ಉಗ್ರಂ ಮಂಜು ತೆರೆ ಹಂಚಿಕೊಂಡಿದ್ದಾರೆ. ಆನಂದ್ ರವಿ ವಿಕ್ರಂ ಸಂಗೀತ ಸಂಯೋಜನೆ ನೀಡಿದ್ದು, ಶ್ರೀಕಾಂತ್ ಸಂಕಲನ, ಯೋಗಿ ಛಾಯಾಗ್ರಹಣವಿದೆ.