
ಕಿಶೋರ್ ಮೇಗಳಮನೆ. ನಿರ್ದೇಶನದ ಆದಿತ್ಯ ಅಭಿನಯದ ಬಹುನಿರೀಕ್ಷಿತ ಕಾಂಗರೂ ಚಿತ್ರದ ಟ್ರೈಲರ್ ಅನ್ನು ಇಂದು ಯೂಟ್ಯೂಬಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ನೋಡುಗರ ಗಮನ ಸೆಳೆದಿದೆ.
ಈ ಚಿತ್ರವನ್ನು ಆರೋಹ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಚನ್ನಕೇಶವ, ನರಸಿಂಹಮೂರ್ತಿ, ಚಕ್ರಬಾವಿ, ರಮೇಶ್ ಬಂಡೆ, ಸ್ವಾಮಿ ಮತ್ತು ಕೆಜಿಆರ್ ಗೌಡ ಜಂಟಿಯಾಗಿ ನಿರ್ಮಾಣ ಮಾಡಿದ್ದು, ಆದಿತ್ಯ ಸೇರಿದಂತೆ ರಂಜನಿ ರಾಘವನ್, ಕರಿಸುಬ್ಬು, ನಾಗೇಂದ್ರ, ಗೌತಮ್, ಶಿವಮಣಿ, ಸ್ಪಂದನ ಪ್ರಸಾದ್, ಸುಬ್ಬಲಕ್ಷ್ಮಿ, ಅಶ್ವಿನ್ ಹಾಸನ್, ಪ್ರಶಾಂತ್ ನಟನ ಬಣ್ಣ ಹಚ್ಚಿದ್ದಾರೆ. ಸಾಧು ಕೋಕಿಲ ಸಂಗೀತ ಸಂಯೋಜನೆ ನೀಡಿದ್ದು, ಅರ್ಜುನ್ ಕಿಟ್ಟು ಸಂಕಲನ, ಉದಯಲೀಲಾ ಅವರ ಛಾಯಾಗ್ರಹಣ, ಬಂಡೆ ಚಂದ್ರು ಸಾಹಸ ನಿರ್ದೇಶನವಿದೆ.