ವಿಕೆ ಪ್ರಕಾಶ್ ನಿರ್ದೇಶನದ ಶ್ರೇಯಸ್ ಮಂಜು ಅಭಿನಯದ ‘ವಿಷ್ಣುಪ್ರಿಯ’ ಚಿತ್ರದ ಟ್ರೈಲರ್ ಇಂದು ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಭರ್ಜರಿ ವೀಕ್ಷಣೆ ಪಡೆದುಕೊಂಡಿದೆ. ಈ ಟ್ರೈಲರ್ ಗೆ ನೋಡುಗರಿಂದ ಸಾಕಷ್ಟು ಮೆಚ್ಚುಗೆ ದೊರೆತಿದ್ದು, ಇದೇ ಫೆಬ್ರವರಿ 31ರಂದು ತೆರೆ ಮೇಲೆ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ.
ಈ ಚಿತ್ರವನ್ನು ಶ್ರೇಯಸ್ ಅವರ ತಂದೆ ಕೆ ಮಂಜು ತಮ್ಮ ಕೆ ಮಂಜು ಸಿನಿಮಾಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ಶ್ರೇಯಸ್ ಅವರಿಗೆ ಜೋಡಿಯಾಗಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯಿಸಿದ್ದಾರೆ. ಇನ್ನುಳಿದಂತೆ ಅಚ್ಯುತ್ ಕುಮಾರ್, ಸುಚೇಂದ್ರ ಪ್ರಸಾದ್, ನಿಹಾಲ್ ರಾಜ್ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಸುರೇಶ್ urs ಸಂಕಲನ, ವಿನೋದ್ ಭಾರತಿ ಛಾಯಾಗ್ರಹಣ, ರಂಜಿತ್ ವೈಕಟಿಲ್ ವೇಷಭೂಷಣ, ಹಾಗೂ ವಿಕ್ರಮ್ ಮೋರ್, ವಿನೋದ್ ಅವರ ಸಾಹಸ ನಿರ್ದೇಶನವಿದೆ. ಗೋಪಿ ಸುಂದರ್ ಸಂಗೀತ ಸಂಯೋಜನೆ ನೀಡಿದ್ದಾರೆ.