ನಾಳೆ ಬಿಡುಗಡೆಯಾಗಲಿದೆ ‘ಛೂ ಮಂತರ್’ ಚಿತ್ರದ ಟ್ರೈಲರ್ 27-12-2024 11:52AM IST / No Comments / Posted In: Featured News, Live News, Entertainment ಶರಣ್ ಅಭಿನಯದ ಕರ್ವ ನವನೀತ್ ಅಭಿನಯದ ಬಹು ನಿರೀಕ್ಷಿತ ‘ಛೂ ಮಂತರ್’ ಚಿತ್ರ ಜನವರಿ 10ರಂದು ತೆರೆ ಕಾಣಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಬಿಡುಗಡೆ ದಿನಾಂಕ ಹತ್ತಿರವಿರುವ ಕಾರಣ ಚಿತ್ರತಂಡ ನಾಳೆ ಟ್ರೈಲರ್ ಬಿಡುಗಡೆ ಮಾಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ. ಹಾರರ್ ಥ್ರಿಲ್ಲರ್ ಕಥಾಂಹಂದರ ಹೊಂದಿರುವ ಈ ಚಿತ್ರವನ್ನು ಮಾನಸ ತರುಣ್ ಮತ್ತು ತರುಣ್ ಶಿವಪ್ಪ ನಿರ್ಮಾಣ ಮಾಡಿದ್ದು, ಶರಣ್ ಸೇರಿದಂತೆ ಅದಿತಿ ಪ್ರಭುದೇವ, ಮೇಘನಾ ಗಾಂವ್ಕರ್, ಚಿಕ್ಕಣ್ಣ ತೆರೆ ಹಂಚಿಕೊಂಡಿದ್ದಾರೆ. ವೆಂಕಿ UDV ಸಂಕಲನ,ಡಾ. ಕೆ ರವಿವರ್ಮ ಸಾಹಸ ನಿರ್ದೇಶನ, ದರ್ಶಿನಿ ಡೆಲ್ಟಾ ನಾಗರಾಜ್ ಅವರ ನೃತ್ಯ ನಿರ್ದೇಶನ, ಅನುಪ್ ಕಟ್ಟುಕರನ್ ಛಾಯಾಗ್ರಹಣವಿದೆ. View this post on Instagram A post shared by ADITI PRABHUDEVA (@aditiprabhudeva)