ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕಿರಣ್ ಸ್ವಾಮಿ ನಿರ್ದೇಶನದ ‘ದಿ ಡಾರ್ಕ್ E ವೆಬ್’ ಚಿತ್ರದ ಟ್ರೈಲರ್ ಇಂದು ಎಂ. ಆರ್. ಟಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಸಂಜೆ 5:00 ಗಂಟೆಗೆ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದೆ.
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮಂಜು ಬನವಾಸೆ ಸೇರಿದಂತೆ ಚೇತನ್ ಹರೀಶ್, ಮೇಘನಾ, ಬಾಲು, ಗೌತಮ್ ಚಂದ್ರ, ನಾಗರಾಜು, ಬೊಮ್ಮೇಗೌಡ, ಭಾರತೀಶ್, ವಿಕ್ರಮ್ ಸ್ಕಂದ, ಡೇವಿಡ್ ತಾರಾ ಬಳಗದಲ್ಲಿದ್ದಾರೆ. ಮಂಜು ಬನವಾಸೆ ಮತ್ತು ನಾಗರಾಜ್ ಬಂಡವಾಳ ಹೂಡಿದ್ದು, ದೀಪಕ್ ಸಂಕಲನ, ಮತ್ತು ಚಂದ್ರ ಮೌಳಿ ಛಾಯಾಗ್ರಹಣವಿದೆ. ವಿಶಾಕ್ ನಾಗಲಾಪುರ ಸಂಗೀತ ಸಂಯೋಜನೆ ನೀಡಿದ್ದಾರೆ.