
ಈ ಚಿತ್ರವನ್ನು ದಿಶಾ ಎಂಟರ್ಪ್ರೈಸಸ್ ಬ್ಯಾನರ್ ನಲ್ಲಿ ಸಂತೋಷ್ ಡಿಂಕಾ ಮಹದೇವಪ್ಪ ನಿರ್ಮಾಣ ಮಾಡಿದ್ದು, ಮನ್ವಿತ್ ಮತ್ತು ರೇಖಾದಾಸ್ ಪುತ್ರಿ ಶ್ರಾವ್ಯ ಮುಖ್ಯಭೂಮಿಕೆಯಲ್ಲಿದ್ದಾರೆ. ಸಂಗೀತಾ, ಚೇತನ್ ರಾಜ್, ತುಕಾಲಿ ಸಂತು, ಪ್ರಕಾಶ್ ಶಣಯ್, ನಾಗರತ್ನ, ಮಹಾಂತೇಶ್, ಮಂಜು ಕವಿ, ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಸಂಜೀವ್ ರೆಡ್ಡಿ ಸಂಕಲನ, ಮದನ್ ಮತ್ತು ಹರಿಣಿ ಅವರ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಹಾಗೂ ವಿದ್ಯಾ ನಾಗೇಶ್ ಛಾಯಾಗ್ರಹಣವಿದೆ. ವಿಜಯ್ ಹರಿತ್ಸ ಸಂಗೀತ ಸಂಯೋಜನೆ ನೀಡಿದ್ದಾರೆ.