
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ‘ಘೋಸ್ಟ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದ್ದು, ತೆಲುಗು ಟ್ರೈಲರನ್ನು ನಿರ್ದೇಶಕ ರಾಜಮೌಳಿ ಲಾಂಚ್ ಮಾಡಲಿದ್ದಾರೆ.
ಇನ್ನುಳಿದಂತೆ ಧನುಷ್ ಹಾಗೂ ಪೃಥ್ವಿರಾಜ್ ಸುಕುಮಾರನ್ ತಮಿಳು ಹಾಗೂ ಮಲಯಾಳಂ ಟ್ರೈಲರ್ ಅನ್ನು ರಿಲೀಸ್ ಮಾಡುತ್ತಿದ್ದಾರೆ. ಈ ಕುರಿತು ಚಿತ್ರ ತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
ಎಂಜಿ ಶ್ರೀನಿವಾಸ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಕಥಾಧಾರಿತ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಸೇರಿದಂತೆ ಜಯರಾಮ್, ಅನುಪಮ್ ಖೇರ್, ಪ್ರಶಾಂತ್ ನಾರಾಯಣನ್, ಸತ್ಯ ಪ್ರಕಾಶ್, ಅರ್ಚನ ಜೋಯಿಸ್ ಬಣ್ಣ ಹಚ್ಚಿದ್ದಾರೆ.
ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದು, ಸಂದೇಶ್ ನಾಗರಾಜ್ ತಮ್ಮ ಸಂದೇಶ್ ಪ್ರೊಡಕ್ಷನ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದಾರೆ. ದೀಪು ಎಸ್ ಕುಮಾರ್ ಸಂಕಲನವಿದ್ದು, ಪ್ರಸನ್ನ ವಿಎಂ ಹಾಗೂ ಮಾಸ್ತಿ ಡೈಲಾಗ್ ಬರೆದಿದ್ದಾರೆ. ಅಕ್ಟೋಬರ್ 19ರಂದು ಈ ಸಿನಿಮಾ ತೆರೆ ಕಾಣಲಿದೆ.

