ರಿಲೀಸ್ ಆಯ್ತು ಅರ್ಜುನ್ ಸರ್ಜಾ ನಟನೆಯ ‘ವಿರುನ್ನು’ ಟ್ರೈಲರ್ 24-08-2024 9:32PM IST / No Comments / Posted In: Featured News, Live News, Entertainment ಅರ್ಜುನ್ ಸರ್ಜಾ ಅಭಿನಯದ ಕಣ್ಣನ್ ತಾಮರಕ್ಕುಳಂ ನಿರ್ದೇಶನದ ‘ವಿರುನ್ನು’ ಎಂಬ ಮಲಯಾಳಂ ಚಿತ್ರದ ಟ್ರೈಲರ್ ನಿನ್ನೆಯಷ್ಟೇ ರಿಚ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಟ್ರೈಲರ್ ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ರಿಲೀಸ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. ಈ ಚಿತ್ರವನ್ನು ಗಿರೀಶ್ ನೆಯ್ಯರ್ ನಿರ್ಮಾಣ ಮಾಡಿದ್ದು, ಅರ್ಜುನ್ ಸರ್ಜಾ ಹಾಗೂ ನಿಕ್ಕಿ ಗಲ್ರಾನಿ ಸೇರಿದಂತೆ ಆಶಾ ಶರತ್, ಧರ್ಮಜನ್ ಬೋಲ್ಗಟ್ಟಿ, ಅಜು ವರ್ಗೀಸ್, ಬೈಜು ಸಂತೋಷ್, ಮುಖೇಶ್, ಹರೀಶ್ ಪೆರಾಡಿ, ಗಿರೀಶ್ ನೆಯ್ಯರ್ ಬಣ್ಣ ಹಚ್ಚಿದ್ದಾರೆ ವಿಟಿ ಶ್ರೀಜಿತ್ ಸಂಕಲನ, ಪ್ರದೀಪ್ ರಂಗನ್ ವೇಷಭೂಷಣ, ರವಿಚಂದ್ರನ್ ಹಾಗೂ ಪ್ರದೀಪ್ ನಾಯರ್ ಛಾಯಾಗ್ರಹಣವಿದೆ ರತೀಶ್ ವೇಗ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.