
ಯೋಗರಾಜ್ ಭಟ್ ನಿರ್ದೇಶನದ ಯಶಸ್ ಸೂರ್ಯ ಅಭಿನಯದ ಬಹುನಿರೀಕ್ಷಿತ ‘ಗರಡಿ’ ಚಿತ್ರ ನವೆಂಬರ್ ಹತ್ತರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಇದಕ್ಕೂ ಮುಂಚೆ ಚಿತ್ರತಂಡ ಟೈಟಲ್ ಟ್ರ್ಯಾಕ್ ಒಂದನ್ನು ಬಿಡುಗಡೆ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ. ಸರಿಗಮಪ ಕನ್ನಡ ಯುಟ್ಯೂಬ್ ಚಾನೆಲ್ ನಲ್ಲಿ ಈ ಹಾಡನ್ನು ವೀಕ್ಷಿಸಬಹುದಾಗಿದೆ.
ಕೌರವ ಪ್ರೊಡಕ್ಷನ್ ಹೌಸ್ ಹಾಗೂ ಸೌಮ್ಯ ಫಿಲಂಸ್ ಬ್ಯಾನರ್ ನಲ್ಲಿ ಶ್ರೀಮತಿ ವನಜ ಪಾಟೀಲ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜನೆ ನೀಡಿದ್ದಾರೆ. ಯಶಸ್ ಸೂರ್ಯ, ಸೇರಿದಂತೆ ಸೋನಾಲ್ ಮೊಂಟೆರೊ, ಬಿಸಿ ಪಾಟೀಲ್, ಸುಜಯ್ ಬೇಲೂರು ತೆರೆ ಹಂಚಿಕೊಂಡಿದ್ದಾರೆ.
