
ಆನಂದರಾಜ್ ರಚಿಸಿ ನಿರ್ದೇಶಿಸಿರುವ ಅನಿರುದ್ಧ್ ಅಭಿನಯದ ‘chef ಚಿದಂಬರ’ ಚಿತ್ರದ ಟೈಟಲ್ ಟ್ರ್ಯಾಕ್ ಇದೆ ಮೇ ಹತ್ತಕ್ಕೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ. ಈ ಹಾಡಿಗೆ ಅನಿರುದ್ಧ್ ಜಟಕಾರ್ ಅವರೇ ಧ್ವನಿಯಾಗಿದ್ದು, ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜನೆ ನೀಡಿದ್ದಾರೆ. ಶ್ರೀ ಗಣೇಶ್ ಪರಶುರಾಮ್ ಸಾಹಿತ್ಯವಿದೆ.
ಕಾಮಿಡಿ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರವನ್ನು ರೂಪ ಡಿಎನ್ ನಿರ್ಮಾಣ ಮಾಡಿದ್ದು, ಅನಿರುದ್ಧ್ ಸೇರಿದಂತೆ ರಚಿಲ್ ಡೇವಿಡ್, ನಿಧಿ ಸುಬ್ಬಯ್ಯ ಶ್ರೀಧರ್, ಮಾಹಂತೇಶ್, ಮತ್ತು ಶರತ್ ಲೋಹಿತಾಶ್ವ, ಪ್ರಮುಖ ಪಾತ್ರದಲ್ಲಿದ್ದಾರೆ. ನರಸಿಂಹಮೂರ್ತಿ ಸಾಹಸ ನಿರ್ದೇಶನ, ವಿಜೇತ್ ಚಂದ್ರ ಸಂಕಲನ, ಮಾಧುರಿ ಪರಶುರಾಮ್ ನೃತ್ಯ ನಿರ್ದೇಶನ, ಉದಯ್ ಲೀಲಾ ಛಾಯಾಗ್ರಹಣವಿದೆ. ಖ್ಯಾತ ಸಂಗೀತ ನಿರ್ದೇಶಕ ರಿತ್ವಿಕ್ ಮುರಳಿಧರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.