
ರಾಜ್ ಗುರು ನಿರ್ದೇಶನದ ಗೌರಿಶಂಕರ್ ಅಭಿನಯದ ”ಕೆರೆ ಬೇಟೆ” ಚಿತ್ರದ ಟೈಟಲ್ ಸಾಂಗ್ ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಈ ಹಾಡಿನ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದ್ದು, ಸಂಸದ ಬಿ ವೈ ರಾಘವೇಂದ್ರ ಈ ಹಾಡನ್ನು ಲಾಂಚ್ ಮಾಡಲಿದ್ದಾರೆ.
ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದೆ. ಹಳ್ಳಿ ಸೊಗಡಿನ ಈ ಹಾಡಿಗೆ ಕರಿಬಸವ ಧ್ವನಿಯಾಗಿದ್ದು, ಗಗನ್ ಸಂಗೀತ ಮತ್ತು ಪ್ರಮೋದ್ ಮರವಂತೆ ಸಾಹಿತ್ಯವಿದೆ.
ಈ ಚಿತ್ರವನ್ನು ಜನಮನ ಸಿನಿಮಾ ಬ್ಯಾನರ್ ನಲ್ಲಿ ಜೈ ಶಂಕರ್ ಪಾಟೀಲ್ ನಿರ್ಮಾಣ ಮಾಡಿದ್ದು, ಗೌರಿಶಂಕರ್ ಅವರಿಗೆ ಜೋಡಿಯಾಗಿ ಬಿಂದು ಶಿವರಾಂ ಅಭಿನಯಿಸಿದ್ದಾರೆ.
ಗೋಪಾಲ್ ದೇಶಪಾಂಡೆ, ಸಂಪತ್ ಮೈತ್ರಿಯ, ಹರಿಣಿ ಶ್ರೀಕಾಂತ್, ಚಿಲ್ಲರ್ ಮಂಜು, ರಾಕೇಶ್ ಪೂಜಾರಿ, ವರ್ಧನ್ ತೀರ್ಥಹಳ್ಳಿ, ರಾಮದಾಸ್, ರಘುರಾಜನಂದ ಮತ್ತು ಶೇಖರ್ ತೆರೆ ಹಂಚಿಕೊಂಡಿದ್ದಾರೆ. ಗಗನ್ ಸಂಗೀತ ಸಂಯೋಜನೆ ನೀಡಿದ್ದು, ಜ್ಞಾನೇಶ್ ಬಿ ಮಾತಾಡ್ ಸಂಕಲನ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಡಿಫ್ರೆಂಟ್ ಡ್ಯಾನಿ ಮತ್ತು ಟೈಗರ್ ಶಿವು ಸಾಹಸ ನಿರ್ದೇಶನವಿದೆ.
