ನಾಗಭೂಷಣ್ ಎಸ್ಆರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರದ ಟೈಟಲ್ ಪೋಸ್ಟರ್ ಇದೇ ಜುಲೈ 13ರಂದು ಅನಾವರಣಗೊಳ್ಳಲಿದ್ದು, ನಾಯಕನ ಪರಿಚಯವನ್ನು ಮಾಡಲಿದ್ದಾರೆ, ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.
ಈ ಚಿತ್ರವನ್ನು ಶ್ರೀ ಮಹೇಶ್ವತಿ ಕಂಬೈನ್ ಬ್ಯಾನರ್ ನಲ್ಲಿ ಆರ್ ನಾಗೇಶ್ ನಿರ್ಮಾಣ ಮಾಡುತ್ತಿದ್ದಾರೆ. ಇಷ್ಟು ದಿನ ಪ್ರೊಡಕ್ಷನ್ ನಂಬರ್ ಒನ್ ಎಂಬ ಟೈಟಲ್ ಇಟ್ಟಿದ್ದ ನಿರ್ದೇಶಕರು ಈ ವಿಭಿನ್ನ ಕಥೆ ಮನ ಮುಟ್ಟುವಲ್ಲಿ ಯಶಸ್ವಿಯಾಗಲಿದೆ. ಎಂದು ಮಾಧ್ಯಮ ಒಂದರಲ್ಲಿ ತಿಳಿಸಿದ್ದಾರೆ. ಜುಲೈ 13ಕ್ಕೆ ಸಂಜೆ ಆರು ಮೂವತ್ತಕ್ಕೆ ಶೀರ್ಷಿಕೆ ಮತ್ತು ನಾಯಕನ ಫಸ್ಟ್ ಲುಕ್ ಬಿಡುಗಡೆ ಸಮಾರಂಭ ನಡೆಯಲಿದೆ.