
ಹಾಸ್ಯ ಚಿತ್ರಗಳ ಮೂಲಕ ಸ್ಯಾಂಡಲ್ವುಡ್ ನಲ್ಲಿ ತಮ್ಮದೇ ಬ್ರಾಂಡ್ ಹೊಂದಿರುವ ಸೆನ್ಸೇಷನಲ್ ಸ್ಟಾರ್ ಕೋಮಲ್ ಅಭಿನಯದ ಇಪ್ಪತ್ತೈದನೇ ಚಿತ್ರದ ಟೈಟಲ್ ಬಿಡುಗಡೆ ಮಾಡುವ ಮೂಲಕ ಬಂಡೆ ಮಹಾಕಾಳಿ ದೇವಾಲಯದಲ್ಲಿ ಮುಹೂರ್ತ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ. ಈ ಚಿತ್ರಕ್ಕೆ ‘ಕುಟೀರ’ ಎಂಬ ಟೈಟಲ್ ಇಡಲಾಗಿದೆ.
ಈ ಚಿತ್ರವನ್ನು ಅನುಪ್ ಆಂಥೋನಿ ನಿರ್ದೇಶಿಸುತ್ತಿದ್ದು, ಶ್ರೀ ಕಂಸಾಳೆ ಫಿಲಂಸ್ ಬ್ಯಾನರ್ ನಲ್ಲಿ ಮಧು ಮರಿಸ್ವಾಮಿ ನಿರ್ಮಾಣ ಮಾಡಲಿದ್ದಾರೆ. ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಕೋಮಲ್ ಮತ್ತು ಪ್ರಿಯಾಂಕಾ ತಿಮ್ಮೇಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಎನ್ ಎಂ ವಿಶ್ವ ಸಂಕಲನ, ರವಿವರ್ಮ ಹಾಗೂ ವಿಕ್ರಂ ಸಾಹಸ ನಿರ್ದೇಶನ, ಅರುಣ್ ಸುರೇಶ್ ಛಾಯಾಗ್ರಹಣ ಹಾಗೂ ಭರತ್ ಬಿ.ಜೆ. ಸಂಗೀತ ಸಂಯೋಜನೆ ನೀಡಲಿದ್ದಾರೆ.
