
ತನ್ನ ಟ್ರೈಲರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ಜಸ್ಟ್ ಪಾಸ್’ ಚಿತ್ರದ ಮೂರನೇ ಲಿರಿಕಲ್ ಸಾಂಗ್ ಫೆಬ್ರವರಿ ಒಂದರಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದೆ. ‘ಎಕ್ಸ್ ಕ್ಯೂಸ್ ಮಿ ಕೇಳಿ ನನ್ನ ಲಚ್ಚರು’ ಎಂಬ ಈ ಹಾಡಿಗೆ ನಟ ಶರಣ್ ಧ್ವನಿಯಾಗಿದ್ದಾರೆ.
ಕೆಎಂ ರಾಘು ನಿರ್ದೇಶನದ ಈ ಚಿತ್ರಕ್ಕೆ ರಾಯ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಕೆ ವಿ ಶಶಿಧರ್ ಬಂಡವಾಳ ಹೂಡಿದ್ದು, ನಟ ಶ್ರೀ ಸೇರಿದಂತೆ ಪ್ರಣತಿ, ಸಾಧು ಕೋಕಿಲ, ರಂಗಾಯಣ ರಘು, ಪ್ರಕಾಶ್, ಸುಚೇಂದ್ರ ಪ್ರಸಾದ್, ದೀಪಕ್, ದಾನಪ್ಪ ಮೊದಲಾದವರು ತೆರೆ ಹಂಚಿಕೊಂಡಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆ ನೀಡಿದ್ದು, ಕೆ ಎಂ ಪ್ರಕಾಶ್ ಸಂಕಲನ ಹಾಗೂ ಸುಜಯ್ ಕುಮಾರ್ ಬಾವಿಕಟ್ಟೆ ಛಾಯಾಗ್ರಹಣವಿದೆ.

