ಯೋಗರಾಜ್ ಭಟ್ ಕಥೆ ಬರೆದು ನಿರ್ದೇಶಿಸಿರುವ ಸುಮುಕ್ ಅಭಿನಯದ ‘ಮನದ ಕಡಲು’ ಚಿತ್ರದ ಮೂರನೇ ಹಾಡು ಇಂದು youtube ನಲ್ಲಿ ಬಿಡುಗಡೆಯಾಗಿದೆ. ”ನಗುತಲಿದೆ ನಾಯಿಕೊಡೆ” ಎಂಬ ಈ ಹಾಡಿಗೆ ವಿಜಯ ಪ್ರಕಾಶ್ ಹಾಗೂ ಶ್ರೀ ಲಕ್ಷ್ಮಿ ಬೆಲ್ಮಣ್ಣು ಧ್ವನಿಯಾಗಿದ್ದು, ವಿ ಹರಿಕೃಷ್ಣ ಅವರ ಸಂಗೀತ ಹಾಗೂ ಯೋಗರಾಜ್ ಭಟ್ ಸಾಹಿತ್ಯವಿದೆ.
ಈ ಚಿತ್ರವನ್ನು e.k ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ e ಕೃಷ್ಣಪ್ಪ ನಿರ್ಮಾಣ ಮಾಡಿದ್ದು, ಜೀ ಗಂಗಾಧರ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಸುಮುಖ, ರಾಶಿಕ ಶೆಟ್ಟಿ, ಅಂಜಲಿ ಅನೀಶ್, ಮತ್ತು ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿದ್ದಾರೆ. ಕೆ ಎಂ ಪ್ರಕಾಶ್ ಅವರ ಸಂಕಲನ, ಸಂತೋಷ್ ರಾಯ್ ಪತಾಜೆ ಛಾಯಾಗ್ರಹಣ, ಹಾಗೂ ಕಂಬಿ ರಾಜು ನೃತ್ಯ ನಿರ್ದೇಶನವಿದೆ.