![Upadhyaksha Movie: ಚಿಕ್ಕಣ್ಣ ನಟನೆಯ ಉಪಾಧ್ಯಕ್ಷ ಚಿತ್ರಕ್ಕೆ ಅದ್ದೂರಿ ಮುಹೂರ್ತ](https://static-ai.asianetnews.com/images/01g5qznb7hfq0680zwe8a6j6d4/chikkanna6.jpg)
ಅನಿಲ್ ಕುಮಾರ್ ನಿರ್ದೇಶನದ ‘ಉಪಾಧ್ಯಕ್ಷ’ ಚಿತ್ರದ ಟೀಸರ್ ಅಕ್ಟೋಬರ್ 21 ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದೆ.
ಈ ಸಿನಿಮಾದಲ್ಲಿ ಚಿಕ್ಕಣ್ಣ ಮತ್ತು ಮಲೈಕಾ ವಾಸು ಪಾಲ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಡಿ ಎನ್ ಸಿನಿಮಾಸ್ ಬ್ಯಾನರ್ ನಡಿ ಸ್ಮಿತಾ ಉಮಾಪತಿ ಮತ್ತು ನಿರ್ಮಲಾ ಶ್ರೀನಿವಾಸ್ ನಿರ್ಮಾಣ ಮಾಡಿದ್ದಾರೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ ಕೆಎಂ ಪ್ರಕಾಶ್ ಸಂಕಲನವಿದೆ. ಇನ್ನುಳಿದಂತೆ ಕೆ ಎಲ್ ರಾಜಶೇಖರ್ ಡೈಲಾಗ್ ಬರೆದಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ.
![](https://kannadadunia.com/wp-content/uploads/2023/10/6ed0f0e5-eb33-4b3d-9a8b-ad098bc7991a.jpg)