![](https://kannadadunia.com/wp-content/uploads/2024/02/45fb4567-d33d-45b4-8af6-7ff6530542bb-1024x599.jpg)
ಮಾರ್ಚ್ 15 ರಂದು ತೆರೆ ಮೇಲೆ ಬರಲು ಸಜ್ಜಾಗಿರುವ ‘ಮೆಹಬೂಬ’ ಚಿತ್ರದ ಟೀಸರ್ ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಟೀಸರ್ ಲಾಂಚ್ ಇವೆಂಟ್ ಕಾರ್ಯಕ್ರಮಕ್ಕೆ ಬಿಗ್ ಬಾಸ್ ವಿಜೇತರಾಗಿದ್ದ, ವಿಜಯ ರಾಘವೇಂದ್ರ ಸೇರಿದಂತೆ ಕಾರ್ತಿಕ್ ಮಹೇಶ್, ಶೈನ್ ಶೆಟ್ಟಿ, ಪ್ರಥಮ್, ಮಂಜು ಪಾವಗಡ, ರೂಪೇಶ್ ಶೆಟ್ಟಿ ಅತಿಥಿಗಳಾಗಿ ಆಗಮಿಸಲಿದ್ದು, ನಟ ವಿಜಯ ರಾಘವೇಂದ್ರ ಅವರ ಕೈಯಲ್ಲಿ ಟೀಸರ್ ರಿಲೀಸ್ ಮಾಡಿಸುವುದಾಗಿ ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.
ಅನೂಪ್ ಆಂಟೋನಿ ನಿರ್ದೇಶನದ ಈ ಚಿತ್ರದಲ್ಲಿ ಶಶಿ ಮತ್ತು ಪಾವನ ಗೌಡ ಮುಖ್ಯ ಭೂಮಿಕೆಯಲ್ಲಿದ್ದು, ಮ್ಯಾಥ್ಯೂಸ್ ಮನು ಸಂಗೀತ ಸಂಯೋಜನೆ ನೀಡಿದ್ದಾರೆ. ಶ್ರೀ ಭೈರವೇಶ್ವರ ಎಂಟರ್ಪ್ರೈಸಸ್ ಮತ್ತು ಶ್ರೀ ಬಾಲಾಜಿ ಮೋಶನ್ ಪಿಚ್ಚರ್ಸ್ ನಿರ್ಮಾಣ ಮಾಡಿದೆ. ಕೆ ಎಂ ಪ್ರಕಾಶ್ ಸಂಕಲನ, ರಘು ಶಾಸ್ತ್ರೀ ಸಂಭಾಷಣೆ, ಕಿರಣ್ ಹಂಪಾಪುರ್ ಛಾಯಾಗ್ರಹಣವಿದೆ. ಇದೊಂದು ಲವ್ ಸ್ಟೋರಿ ಕಥಹಂದರ ಹೊಂದಿರುವ ಸಿನಿಮಾ ಎಂದು ಹೇಳಲಾಗಿದೆ.
![](https://kannadadunia.com/wp-content/uploads/2024/02/b34eb0e3-a603-4286-9f66-fd3c9a58a20e-400x606.jpg)