![Actor Diganth Manchale,Photos: ರಿಲೀಸ್‌ಗೆ ರೆಡಿ ಆಗ್ತಿದೆ ದಿಗಂತ್ & ಸಂಗೀತಾ ಜೋಡಿಯ 'ಮಾರಿಗೋಲ್ಡ್' - diganth and sangeetha sringeri starrer marigold kannada movie ready for release - Vijay Karnataka](https://static.langimg.com/thumb/85208180/vijay-karnataka-85208180.jpg?imgsize=282687&width=540&resizemode=3)
ರಾಘವೇಂದ್ರ ನಾಯಕ್ ನಿರ್ದೇಶನದ ದೂದ್ ಪೇಡ ದಿಗಂತ್ ಅಭಿನಯದ ಬಹುನಿರೀಕ್ಷಿತ ‘ಮಾರಿಗೋಲ್ಡ್’ ಚಿತ್ರದ ಟೀಸರ್ ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ನಟಿ ಸಂಗೀತ ಶೃಂಗೇರಿ ತಮ್ಮ instagram ಖಾತೆಯಲ್ಲಿ ತಿಳಿಸಿದ್ದಾರೆ.
ಕಾಮಿಡಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾವನ್ನು ರಘುವರ್ಧನ್ ಶ್ರವಣ ನಿರ್ಮಾಣ ಮಾಡಿದ್ದು, ದೂದ್ ಪೇಡ ದಿಗಂತ್ ಹಾಗೂ ಸಂಗೀತ ಶೃಂಗೇರಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇನ್ನುಳಿದಂತೆ ಸಂಪತ್ ಮೈತ್ರಿಯ, ಕಾಕ್ರೋಚ್ ಸುದೀಪ್ ಬಾಲರಾಜ್ವಾಡಿ ಹಾಗೂ ಯಶ್ ಶೆಟ್ಟಿ ಉಳಿದ ಪಾತ್ರವರ್ಗದಲ್ಲಿದ್ದಾರೆ. ಕೆಎಂ ಪ್ರಕಾಶ್ ಸಂಕಲನ. ವೀರ್ ಸಮರ್ಥ್ ಸಂಗೀತ, ಯೋಗರಾಜ್ ಭಟ್, ಕವಿರಾಜ್ ಹಾಗೂ ವಿಜಯ್ ಬರಂ ಸಾಗರ್ ಅವರ ಸಾಹಿತ್ಯವಿದೆ.
![](https://kannadadunia.com/wp-content/uploads/2024/02/5eece319-0d3c-47f8-b8d0-f932de9aa07c-657x1024.jpg)