
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಲೋಹಿತ್ ನಿರ್ದೇಶನದ ಬಹು ನಿರೀಕ್ಷಿತ ಮಾಫಿಯಾ ಸಿನಿಮಾದ ಡಬ್ಬಿಂಗ್ ಕಾರ್ಯ ಈಗಾಗಲೇ ಮುಕ್ತಾಯವಾಗಿದ್ದು, ಇನ್ನೇನು ತೆರೆ ಮೇಲೆ ಬರಲು ಸಿದ್ಧವಾಗಿದೆ. ಶೀಘ್ರದಲ್ಲೇ ಟೀಸರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಲೋಹಿತ್ ನಿರ್ದೇಶನದ ಈ ಈ ಚಿತ್ರಕ್ಕೆ ಬಿ ಕುಮಾರ್ ಬಂಡವಾಳ ಹೂಡಿದ್ದಾರೆ. ಪಂಡಿ ಕುಮಾರ್ ಛಾಯಾಗ್ರಹಣವಿದ್ದು ಸಿ ರವಿಚಂದ್ರನ್ ಸಂಕಲನವಿದೆ. ಅನುಪ್ ಸೀಳಿನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಜೊತೆ ಅದಿತಿ ಪ್ರಭುದೇವ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಶೈನ್ ಶೆಟ್ಟಿ, ಸಾಧು ಕೋಕಿಲ, ವಾಸುಕಿ ವೈಭವ್, ವಿಜಯ್ ಚಂಡೂರ್ ಬಣ್ಣ ಹಚ್ಚಿದ್ದಾರೆ.
