
ಇತ್ತೀಚಿಗಷ್ಟೇ ತನ್ನ ಹಾಡಿನ ಮೂಲಕ ಸಾಕಷ್ಟು ಸದ್ದು ಮಾಡಿರುವ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಅಭಿನಯದ ಬಹುನಿರೀಕ್ಷಿತ ‘ಗೌರಿ’ ಚಿತ್ರದ ಟೀಸರ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದೆ.
ಈ ಚಿತ್ರದಲ್ಲಿ ಸಮರ್ಜಿತ್ ಲಂಕೇಶ್ ಅವರಿಗೆ ಜೋಡಿಯಾಗಿ ಪುಟ್ಟಗೌರಿ ಖ್ಯಾತಿಯ ಸಾನ್ಯ ಅಯ್ಯರ್ ಅಭಿನಯಿಸಿದ್ದು ಮಾನಸಿ ಸುಧೀರ್ ಸಂಪತ್ ಮೈತ್ರಿಯ ರಾಜೀವ್ ಪಿಲ್ಲೆ ತೆರೆ ಹಂಚಿಕೊಂಡಿದ್ದಾರೆ ಲಾಫಿಂಗ್ ಬುದ್ಧ ಫಿಲಂಸ್ ಬ್ಯಾನರ್ ನಲ್ಲಿ ಇಂದ್ರಜಿತ್ ಲಂಕೇಶ್ ಅವರೇ ಬಂಡವಾಳ ಹೂಡಿದ್ದಾರೆ ಚಂದನ್ ಶೆಟ್ಟಿ ಶಿವು ಬರ್ಗಿ ಮತ್ತು ಅನಿರುದ್ಧ ಶಾಸ್ತ್ರಿ ಸಂಗೀತ ಸಂಯೋಜನೆ ನೀಡಿದ್ದು, ಕೆ ಎಮ್ ಪ್ರಕಾಶ್ ಸಂಕಲನವಿದೆ.
ಮಾಸ್ತಿ ಮಧು ಮತ್ತು ರಾಜ್ಶೇಖರ್ ಸಂಭಾಷಣೆ ಬರೆದಿದ್ದು ರವಿವರ್ಮ ಮತ್ತು ಡಿಫ್ರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನವಿದೆ.
