![](https://kannadadunia.com/wp-content/uploads/2024/03/fc8731ea-7530-44ac-a99a-f8eec950f4b6.jpg)
2022ರಲ್ಲಿ ತೆರೆ ಕಂಡಿದ್ದ ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು, ಈ ಸಿನಿಮಾ ನಾಯಕ ಪ್ರವೀಣ್ ಕುಮಾರ್ ಇದೀಗ ಎರಡು ವರ್ಷಗಳ ಬಳಿಕ ‘ದೇಸಾಯಿ’ ಮೂಲಕ ಸ್ಯಾಂಡಲ್ ವುಡ್ ಗೆ ಮತ್ತೊಮ್ಮೆ ಎಂಟ್ರಿ ಕೊಡುತ್ತಿದ್ದಾರೆ.
ಪ್ರವೀಣ್ ಕುಮಾರ್ ಅಭಿನಯಿಸುತ್ತಿರುವ ‘ದೇಸಾಯಿ’ ಚಿತ್ರದ ಟೀಸರ್ ನಾಳೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರ ತಂಡ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದೆ.
ಈ ಚಿತ್ರವನ್ನು ನಾಗಿ ರೆಡ್ಡಿ ಭಡ ನಿರ್ದೇಶಿಸಿದ್ದು, ವೀರಭದ್ರೇಶ್ವರ ಕ್ರಿಯೇಟಿವ್ ಫಿಲ್ಮ್ಸ್ ಬ್ಯಾನರ್ ನಲ್ಲಿ ಮಹಾಂತೇಶ್ ವಿ ಚೋಳಚ ಗುಡ್ಡ ನಿರ್ಮಾಣ ಮಾಡಿದ್ದಾರೆ. ಪ್ರವೀಣ್ ಕುಮಾರ್ ಗೆ ಜೋಡಿಯಾಗಿ ರಾಧ್ಯ ಅಭಿನಯಿಸಿದ್ದಾರೆ. ಇನ್ನುಳಿದಂತೆ ಪ್ರಶಾಂತ್, ವೀರೇಂದ್ರ, ಹರಿಣಿ, ಚಿತ್ಕಲಾ ಬಿರಾದಾರ್, ಮಧುಸೂದನ್ ರಾವ್, ತೆರೆ ಹಂಚಿಕೊಂಡಿದ್ದಾರೆ. ಸಾಯಿ ಕಾರ್ತಿಕ್ ಸಂಗೀತ ಸಂಯೋಜನೆ ನೀಡಿದ್ದು, ದೀಪು ಎಸ್ ಕುಮಾರ್ ಸಂಕಲನ, ಪಿಕೆ ಎಚ್ ದಾಸ್ ಛಾಯಾಗ್ರಹಣವಿದೆ.
![](https://kannadadunia.com/wp-content/uploads/2024/03/7f11cae3-2782-4487-8500-54e9bd7a8cd2-400x606.jpg)