
ಈಗಾಗಲೇ ತನ್ನ ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸಿರುವ ಪ್ರತೀಕ್ ಪ್ರಜೋಶ್ ನಿರ್ದೇಶನದ ಬಹುನಿರೀಕ್ಷಿತ ‘ಚಿಲ್ಲಿ ಚಿಕನ್’ ಚಿತ್ರದ ಟೀಸರ್ ಶೀಘ್ರದಲ್ಲೇ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.
ಈ ಚಿತ್ರವನ್ನು ಮೆಟಾ ನೋಯ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ದೀಪ್ ಭೀಮಾಜಿಯಾನಿ ಮತ್ತು ಸುಧಾ ನಂಬೈರ್ ನಿರ್ಮಾಣ ಮಾಡಿದ್ದಾರೆ. ಬಿವಿ ಶೃಂಗಾ ಸೇರಿದಂತೆ ನಿತ್ಯಶ್ರೀ, ಪದ್ಮಜ ರಾವ್, ಬಿಜೌ ತಂಗ್ಜಮ್ ತೆರೆ ಹಂಚಿಕೊಂಡಿದ್ದಾರೆ.
ಆಶಿಕ್ ಕುಸುಗೋಳಿ ಸಂಕಲನ, ತ್ರಿಲೋಕ ತ್ರಿವಿಕ್ರಮ ಅವರ ಸಂಭಾಷಣೆ, ಮತ್ತು ಶ್ರೀಶ್ ಛಾಯಾಗ್ರಹಣವಿದೆ. ಸಿದ್ದಾರ್ಥ್ ಕೆಎಸ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇದೊಂದು ನೈಜ ಘಟನೆ ಆಧಾರಿತ ಸಿನಿಮಾ ಎಂದು ಹೇಳಲಾಗಿದೆ.
