)
2012ರಲ್ಲಿ ತೆರೆಕಂಡಿದ್ದ ಲೂಸ್ ಮಾದ ಯೋಗಿ ಮತ್ತು ರಮ್ಯ ಅಭಿನಯದ ‘ಸಿದ್ಲಿಂಗು’ ಚಿತ್ರ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿತ್ತು. ಇದೀಗ ಇದರ ಮುಂದುವರೆದ ಭಾಗ ‘ಸಿದ್ಲಿಂಗು 2’ ತೆರೆ ಮೇಲೆ ಬರಲು ಸಜ್ಜಾಗಿದೆ. ‘ಸಿದ್ಲಿಂಗು 2’ ಚಿತ್ರತಂಡ ಮೊದಲನೇ ಹಂತದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಯುಗಾದಿಗೆ ಸಿಹಿ ಸುದ್ದಿ ಎಂದು ಹೇಳಿದ್ದಾರೆ.
ವಿಜಯ್ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಲೂಸ್ ಮಾದ ಯೋಗಿ ಮತ್ತು ಸೋನು ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಿಹಾರಿಕಾ ಮೂವೀಸ್ ಬ್ಯಾನರ್ ನಲ್ಲಿ ಶ್ರೀಹರಿ ನಿರ್ಮಾಣ ಮಾಡಿದ್ದಾರೆ. ಯೋಗೇಶ್. ವಿಜಯ ಪ್ರಸಾದ್ ಮತ್ತು ಮಂಜುನಾಥ್ ರಾಧಾಕೃಷ್ಣ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದಾರೆ.