ದಿನಕರ್ ಎಸ್ ನಿರ್ದೇಶನದ ವಿರಾಟ್ ಅಭಿನಯದ ‘ರಾಯಲ್’ ಚಿತ್ರ ಈಗಾಗಲೇ ತನ್ನ ಹಾಡುಗಳಿಂದಲೇ ಎಲ್ಲರ ಗಮನ ಸೆಳೆದಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ. ರಾಯಲ್ ಚಿತ್ರತಂಡ ಇಂದು ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಈ ಚಿತ್ರದಲ್ಲಿ ವಿರಾಟ್ ಗೆ ಜೋಡಿಯಾಗಿ ಸಂಜನಾ ಆನಂದ್ ಅಭಿನಯಿಸಿದ್ದು, ರಘು ಮುಖರ್ಜಿ, ಛಾಯಾ ಸಿಂಗ್, ಅಚ್ಯುತ್ ಕುಮಾರ್, ರಂಗಾಯಣ ರಘು, ಪ್ರಮೋದ್ ಶೆಟ್ಟಿ, ಗೋಪಾಲ್ ದೇಶ್ಪಾಂಡೆ, ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಜಯಣ್ಣ ಫಿಲಂಸ್ ಬ್ಯಾನರ್ ನಲ್ಲಿ ಜಯಣ್ಣ- ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ. ಕೆಎಂ ಪ್ರಕಾಶ್ ಸಂಕಲನ, ಸಂಕೇತ್ ಛಾಯಾಗ್ರಹಣ ರಘು ನಿಡುವಳ್ಳಿ ಸಂಭಾಷಣೆ: ಹಾಗೂ ಡಾ. ಕೆ. ರವಿ ವರ್ಮ ಅವರ ಸಾಹಸ ನಿರ್ದೇಶನವಿದೆ. ಚರಣ್ರಾಜ್ ಎಂ ಆರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.