
ಈ ಸಿನಿಮಾ ಇದೀಗ 25 ದಿನಗಳನ್ನು ಪೂರೈಸಿದ್ದು, ತನ್ನ ನಾಗಾಲೋಟವನ್ನು ಮುಂದುವರಿಸಿದೆ. ‘ಕೃಷ್ಣಂ ಪ್ರಣಯ ಸಖಿ’ ಚಿತ್ರತಂಡ ನಿನ್ನೆಯಷ್ಟೇ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದು, ನಟಿ ಶರಣ್ಯ ಶೆಟ್ಟಿ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ
ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಗೆ ಜೋಡಿಯಾಗಿ ಶರಣ್ಯ ಶೆಟ್ಟಿ ಮತ್ತು ಮಾಳವಿಕಾ ನಾಯರ್ ಅಭಿನಯಿಸಿದ್ದು, ತ್ರಿಶೂಲ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಪ್ರಶಾಂತ್ ಜಿ. ರುದ್ರಪ್ಪ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ. ಕೆ ಎಂ ಪ್ರಕಾಶ್ ಸಂಕಲನ, ವಿಜಯ್ ಈಶ್ವರ್ ಸಂಭಾಷಣೆ ಮತ್ತು ವೆಂಕಟರಾಮ್ ಪ್ರಸಾದ್ ಛಾಯಾಗ್ರಹಣವಿದೆ. ಸಚಿನ್ ಶೆಟ್ಟಿ ಕುಂಬ್ಳೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.