
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ತ್ರಿ ವಿಕ್ರಂ ಶ್ರೀನಿವಾಸ್ ನಿರ್ದೇಶನದ ‘ಗುಂಟೂರು ಕಾರಂ’ ಚಿತ್ರ ಮುಂದಿನ ವರ್ಷ ಜನವರಿ 12ಕ್ಕೆ ತೆರೆ ಮೇಲೆ ಬರಲಿದ್ದು, ಚಿತ್ರತಂಡ ಇಂದು ಹೊಸ ಪೋಸ್ಟರ್ ಒಂದನ್ನು ಅಪ್ಲೋಡ್ ಮಾಡುವ ಮೂಲಕ ಮಹೇಶ್ ಬಾಬು ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡುವುದಾಗಿ ತಿಳಿಸಿದೆ.
ಈ ಸಿನಿಮಾವನ್ನು ಹಾರಿಕಾ ಮತ್ತು ಅಸೈನ್ ಕ್ರಿಯೇಶನ್ ಬ್ಯಾನರ್ ನಡಿ ರಾಧಾಕೃಷ್ಣ ನಿರ್ಮಾಣ ಮಾಡಿದ್ದು, ತಮನ್ ಎಸ್ ಸಂಗೀತ ಸಂಯೋಜನೆ ನೀಡಿದ್ದಾರೆ. ಮಹೇಶ್ ಬಾಬು ಸೇರಿದಂತೆ ಮೀನಾಕ್ಷಿ ಚೌದರಿ, ಶ್ರೀ ಲೀಲಾ, ಜಗಪತಿ ಬಾಬು, ರಮ್ಯಕೃಷ್ಣ, ಪ್ರಕಾಶ್ ರಾಜ್, ಜಯರಾಮ್, ರಾಘು ಬಾಬು, ಬ್ರಹ್ಮಾನಂದಂ, ತೆರೆ ಹಂಚಿಕೊಂಡಿದ್ದಾರೆ.