
ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ನಾಯಕ ನಟನಾಗಿ ಅಭಿನಯಿಸಿರುವ ‘ಗೌರಿ’ ಸಿನಿಮಾದ ಹೊಸ ಪೋಸ್ಟರ್ ಒಂದನ್ನು ಇಂದು ಪ್ರೇಮಿಗಳ ದಿನದ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ ಇಂದ್ರಜಿತ್ ಲಂಕೇಶ್ ಅವರೇ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ಸಮರ್ಜಿತ್ ಗೆ ಜೋಡಿಯಾಗಿ ಸಾನಿಯಾ ಅಯ್ಯರ್ ನಾಯಕಿಯಾಗಿ ಅಭಿನಯಿಸಿದ್ದು, ಲಾಫಿಂಗ್ ಬುದ್ಧ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದೆ.
ಚಂದನ್ ಶೆಟ್ಟಿ ಮತ್ತು ಅನಿರುದ್ ಶಾಸ್ತ್ರಿ ಸಂಗೀತ ಸಂಯೋಜನೆ ನೀಡಿದ್ದು, ಮಧು, ರಾಜಶೇಖರ್, ಹಾಗೂ ಮಾಸ್ತಿ ಡೈಲಾಗ್ ಬರೆದಿದ್ದಾರೆ, ಕೆಎಂ ಪ್ರಕಾಶ್ ಸಂಕಲನವಿದೆ, ಇದೊಂದು ನೈಜ ಘಟನಾಧಾರಿತ ಸಿನಿಮಾ ಎಂದು ಹೇಳಲಾಗಿದ್ದು, ಈಗಾಗಲೇ ಬಹುತೇಕ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡ ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಪ್ರಕಟ ಮಾಡುವ ನಿರೀಕ್ಷೆಯಲ್ಲಿದೆ.
