ಇತ್ತೀಚಿಗಷ್ಟೇ ನಡೆದ ಜಿಂಬಾಬ್ವೆ ಹಾಗೂ ಪಾಕಿಸ್ತಾನ ನಡುವಣ ಮೂರು ಟಿ ಟ್ವೆಂಟಿ ಪಂದ್ಯಗಳಲ್ಲಿ ಪಾಕಿಸ್ತಾನ ತಂಡ 2-1 ರಿಂದ ಸರಣಿ ತನ್ನದಾಗಿಸಿಕೊಂಡಿದ್ದು, ಜಿಂಬಾಬ್ವೆ ತಂಡಕ್ಕೆ ತನ್ನ ಮನೆ ಅಂಗಳದಲ್ಲಿ ಮತ್ತೊಮ್ಮೆ ಮುಖಭಂಗವಾಗಿದೆ.
ಇದೀಗ ಅವರ ಹೋಂ ಗ್ರೌಂಡ್ ನಲ್ಲೇ ಅಫ್ಘಾನಿಸ್ತಾನ ತಂಡವನ್ನು ಎದುರಿಸಲು ಸಜ್ಜಾಗಿದೆ. ಹರಾರೆಯಲ್ಲಿ ಆಫ್ಘಾನಿಸ್ತಾನ ಹಾಗೂ ಜಿಂಬಾಬ್ವೆ ನಡುವೆ ಡಿಸೆಂಬರ್ 11 ರಿಂದ 14ರವರೆಗೆ ಮೂರು ಟಿ 20 ಪಂದ್ಯಗಳು ನಡೆಯಲಿದ್ದು, ಇದಾದ ಬಳಿಕ ಏಕದಿನ ಸರಣಿ ಕೂಡ ಇರಲಿದೆ. ಈಗಾಗಲೇ ಉಭಯ ತಂಡಗಳ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಅಫ್ಘಾನಿಸ್ತಾನ: ರಶೀದ್ ಖಾನ್ (ನಾಯಕ), ಮೊಹಮ್ಮದ್ ನಬಿ, ದರ್ವಿಶ್ ರಸೂಲಿ, ಜುಬೈದ್ ಅಕ್ಬರಿ, ಗುಲ್ಬದಿನ್ ನೈಬ್, ಕರೀಮ್ ಜನತ್, ಅಜ್ಮತುಲ್ಲಾ ಮುಜೆಬ್ಜಾಯ್, ರಹಮಾನ್ ಒಮರ್ಜಾಯ್, ನೂರ್ ಅಹ್ಮದ್, ಫಜಲ್ ಹಕ್ ಫಾರೂಕಿ, ಫರೀದ್ ಅಹ್ಮದ್ ಮತ್ತು ನವೀನ್ ಉಲ್ ಹಕ್, ರಹಮಾನುಲ್ಲಾ ಗುರ್ಬಾಜ್ (wk), ಮೊಹಮ್ಮದ್ ಇಶಾಕ್ (WK), ಸೇದಿಕುಲ್ಲಾ ಅಟಲ್, ಹಜರತುಲ್ಲಾ ಝಜೈ,
ಜಿಂಬಾಬ್ವೆ: ಸಿಕಂದರ್ ರಜಾ, ವೆಲ್ಲಿಂಗ್‌ಟನ್ ಮಸಕಡ್ಜಾ, ಬ್ರಾಂಡನ್ ಮಾವುಟಾ, ತಶಿಂಗಾ ಮುಸೆಕಿವಾನಿ, ಬಲೆಸ್ಸಿಂಗ್, ಫರಾಜ್ ಅಕ್ರಂ, ಬ್ರಿಯಾನ್ ಬೆನೆಟ್, ರಿಯಾನ್ ಬರ್ಲ್, ಟ್ರೆವರ್ ಗ್ವಾಂಡು, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ಟಿನೊಟೆಂಡಾ ಮಾಪೋಸಾ, ತಡಿವಾನಾಶೆ ಮರುಮಾನಿ.