ಬೆಂಗಳೂರು : 7 ಐಪಿಎಸ್ (IPS) ಅಧಿಕಾರಿಗಳ ವರ್ಗಾವಣೆಗೆ ತಾತ್ಕಾಲಿಕ ತಡೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮಹತ್ವದ ಬೆಳವಣಿಗೆಯಲ್ಲಿ ಐಪಿಎಸ್ ಅಧಿಕಾರಿಗಳಾದ ಅಕ್ಷಯ್ ಮಚೀಂದ್ರ, ಅಬ್ದುಲ್ ಅಹದ್, ಭೀಮಾಶಂಕರ್ ಗುಳೇದ್, ಶೇಖರ್ ಟೆಕ್ಕಣನವರ್, ಸೈದುಲ್ಲಾ ಅಡಾವತ್, ನಿರಂಜನ್ ರಾಜೇ ಅರಸ್, ಬದರೀನಾಥ್ಗೆ ಸೂಚನೆ ನೀಡಲಾಗಿದೆ. ಕೂಡಲೇ ಡಿಜಿ-ಐಜಿಪಿ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ.
ರಾಜ್ಯ ಸರ್ಕಾರ ರಾತ್ರೋ ರಾತ್ರಿ 35 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು, ಈ ಬೆನ್ನಲ್ಲೇ ಇದೀಗ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ತಾತ್ಕಾಲಿಕ ತಡೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.