ಬೆಂಗಳೂರು : ‘ ನಮ್ಮ ಮೆಟ್ರೋ’ ಗೆ ಬಸವೇಶ್ವರ ಮೆಟ್ರೋ ಎಂದು ಹೆಸರಿಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೌದು, ಈ ಕುರಿತಂತೆ ಸಚಿವ ಎಂಬಿ ಪಾಟೀಲ್ ಮಾತನಾಡಿದ್ದು , ನಮ್ಮ ಮೆಟ್ರೋಗೆ ಬಸವೇಶ್ವರ ಮೆಟ್ರೋ ಎಂದು ಹೆಸರಿಡಲು ಮನವಿ ಬಂದಿದೆ. ಈ ಬಗ್ಗೆ ಸಿಎಂ ಜೊತೆ ಮಾತನಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಎರಡೂವರೆ ವರ್ಷದ ಬಳಿಕ ಸಿಎಂ ಬದಲಾವಣೆ ವಿಚಾರಕ್ಕೆ ಮಾತನಾಡಿದ ಸಚಿವ ಎಂಬಿ ಪಾಟೀಲ್ ನಮ್ಮಲ್ಲಿ ಯಾರು ಸಿಎಂ ಆಗಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸಲಿದೆ. ಹೈಕಮಾಂಡ್ ಆದೇಶಕ್ಕೆ ನಾವು ಬದ್ದರಾಗಿದ್ದೇವೆ ಎಂದು ಅವರು ಹೇಳಿದರು.
ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಸರ್ಕಾರ ರಚಿಸಲು ಬಿಜೆಪಿಗೆ ಶಾಸಕರು ಬೇಕಾಗುತ್ತೆ..ಇದೇನು ಹುಡುಗಾಟದ ಮಾತೇನು..? ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು ಮೆಟ್ರೋ ಎಂದೂ ಕರೆಯಲ್ಪಡುವ ನಮ್ಮ ಮೆಟ್ರೋ , ಭಾರತದ ಬೆಂಗಳೂರು ನಗರಕ್ಕೆ ಸೇವೆ ಸಲ್ಲಿಸುವ ಕ್ಷಿಪ್ರ ಸಾರಿಗೆ ವ್ಯವಸ್ಥೆಯಾಗಿದೆ . [7] ಇದು ದೆಹಲಿ ಮೆಟ್ರೋದ ನಂತರ 73.75 ಕಿಲೋಮೀಟರ್ಗಳ ಕಾರ್ಯಾಚರಣೆಯ ಉದ್ದದೊಂದಿಗೆ ಭಾರತದಲ್ಲಿ ಎರಡನೇ ಅತಿ ಉದ್ದದ ಕಾರ್ಯಾಚರಣೆಯ ಮೆಟ್ರೋ ಜಾಲವಾಗಿದೆ .