ಬೆಂಗಳೂರು : ಜನಸಾಮಾನ್ಯರಿಗೆ ‘ನಮ್ಮ ಕ್ಲಿನಿಕ್’ಗಳು ಉತ್ತಮ ಸೇವೆ ನೀಡುತ್ತಿದ್ದು, ರಾಜ್ಯದಲ್ಲಿ ಶೀಘ್ರದಲ್ಲೇ 254 ಹೊಸ ಕ್ಲಿನಿಕ್ಗಳು ಸೇರ್ಪಡೆಯಾಗಲಿವೆ.
ಹೌದು. ಈಗಾಗಲೇ 503 ‘ನಮ್ಮ ಕ್ಲಿನಿಕ್’ಗಳು ಕಾರ್ಯನಿರ್ವಹಿಸುತ್ತಿದ್ದು ಶೀಘ್ರದಲ್ಲೇ 254 ಹೊಸ ಕ್ಲಿನಿಕ್ಗಳು ಸೇರ್ಪಡೆಯಾಗಲಿವೆ. ಇದಕ್ಕಾಗಿ ಸ್ಥಳ ಗುರುತಿಸುವ ಕಾರ್ಯ ಮುಕ್ತಾಯಗೊಂಡಿದೆ. ಸರ್ಕಾರಿ ಕಟ್ಟಡಗಳಲ್ಲೇ ಹೆಚ್ಚೆಚ್ಚು ಕ್ಲಿನಿಕ್ ತೆರೆಯಲು ಆದ್ಯತೆ ನೀಡಲಾಗಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.