ಬೆಂಗಳೂರು : ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂದು ಬಿಜೆಪಿ ಟ್ವೀಟ್ ನಲ್ಲಿ ತೀವ್ರವಾಗಿ ವಾಗ್ಧಾಳಿ ನಡೆಸಿದೆ.
ಕರ್ನಾಟಕದ ಇತಿಹಾಸದಲ್ಲಿ ಇಂತಹ ಮತಿಗೆಟ್ಟ ಆಡಳಿತ ಎಂದೂ ನಡೆದಿಲ್ಲ. ಇವರು ಸರ್ಕಾರ ನಡೆಸುತ್ತಿದ್ದಾರೋ, ಮದ್ಯದ ಅಂಗಡಿ ನಡೆಸುತ್ತಿದ್ದಾರೋ, ಎಲ್ಲವೂ ಗೊಂದಲಮಯ! ಅರ್ಹರ ಬಿಪಿಎಲ್ ಕಾರ್ಡ್ ರದ್ದೇ ಆಗಿಲ್ಲ ಎಂದು ವಾದಿಸುತ್ತಿದ್ದ ಕಾಂಗ್ರೆಸ್ ಸರ್ಕಾರ ಇಂದು ರದ್ದಾಗಿರುವ ಕಾರ್ಡ್ಗಳನ್ನು ವಾಪಾಸ್ ನೀಡುವುದಾಗಿ ಘೋಷಿಸಿದೆ. ಹಾಗಾದರೆ ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡಿದೆ ಎನ್ನುವ ಬಿಜೆಪಿ ಆರೋಪ ನಿಜ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಂತಾಗಿದೆ. ಗ್ಯಾರಂಟಿಗಳಿಂದಾಗಿ ರಾಜ್ಯ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ, ರಾಜ್ಯದ ಬೊಕ್ಕಸ ದಿನದಿಂದ ದಿನಕ್ಕೆ ಖಾಲಿಯಾಗುತ್ತಿದೆ. ಅವೈಜ್ಞಾನಿಕ ಗ್ಯಾರಂಟಿಗಳ ಜಾರಿಗಾಗಿ ಬಡವರ ಹೊಟ್ಟೆ ಮೇಲೆ ತುಘಲಕ್ ಸಿದ್ದರಾಮಯ್ಯ ಸರ್ಕಾರ ಪ್ರಹಾರ ನಡೆಸುವುದು ಎಷ್ಟು ಸರಿ? ಎಂದು ಬಿಜೆಪಿ ಟ್ವೀಟ್ ನಲ್ಲಿ ತೀವ್ರವಾಗಿ ವಾಗ್ಧಾಳಿ ನಡೆಸಿದೆ.
ಮಂಗನ ಕೈಗೆ ಮಾಣಿಕ್ಯ ❌
ಕಾಂಗ್ರೆಸ್ ಕೈಗೆ ಆಡಳಿತ ✅ಕರ್ನಾಟಕದ ಇತಿಹಾಸದಲ್ಲಿ ಇಂತಹ ಮತಿಗೆಟ್ಟ ಆಡಳಿತ ಎಂದೂ ನಡೆದಿಲ್ಲ. ಇವರು ಸರ್ಕಾರ ನಡೆಸುತ್ತಿದ್ದಾರೋ, ಮದ್ಯದ ಅಂಗಡಿ ನಡೆಸುತ್ತಿದ್ದಾರೋ, ಎಲ್ಲವೂ ಗೊಂದಲಮಯ!
ಅರ್ಹರ ಬಿಪಿಎಲ್ ಕಾರ್ಡ್ ರದ್ದೇ ಆಗಿಲ್ಲ ಎಂದು ವಾದಿಸುತ್ತಿದ್ದ @INCKarnataka ಸರ್ಕಾರ ಇಂದು ರದ್ದಾಗಿರುವ ಕಾರ್ಡ್… pic.twitter.com/qCk6nmBN8a
— BJP Karnataka (@BJP4Karnataka) November 22, 2024