ಬೆಂಗಳೂರು : ರಾಜ್ಯ ಶಿಕ್ಷಣ ನೀತಿ ಸಿದ್ದಪಡಿಸಲು 23 ಸದಸ್ಯರ ಸಮಿತಿ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹೌದು. ರಾಷ್ಟ್ರೀಯ ಶಿಕ್ಷಣ ನೀತಿ ಬದಲಿಗೆ ರಾಜ್ಯ ಶಿಕ್ಷಣ ನೀತಿಯ ಕರಡು ಸಿದ್ದಪಡಿಸಲು 23 ಶಿಕ್ಷಣ ತಜ್ಞರು , ವಿಷಯ ಪರಿಣಿತರ ಸಮಿತಿಯನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿದೆ, ಸಮಿತಿಗೆ ಯುಜಿಸಿ ಮಾಜಿ ಮುಖ್ಯಸ್ಥ ಪ್ರೊ. ಥೋರಟ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಈ ಸಮಿತಿಯಲ್ಲಿ ಸದಸ್ಯರಾಗಿ ನಿವೃತ್ತ ಐಎಎಸ್ ಅಧಿಕಾರಿ ಸಂಜಯ್ ಕೌಲ್, ಬೆಂಗಳೂರು ಮಾಜಿ ಉಪ ಕುಲಪತಿ ಪ್ರೊ. ಎಸ್. ಜೊಸೆಫ್, ಬೆಂಗಳೂರು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದ ಉಪ ಕುಲಪತಿ ಸುಧೀರ್ ಕೃಷ್ಣಸ್ವಾಮಿ.ಅಲ್ಲದೆ ನಿವೃತ್ತ ಪ್ರಾಧ್ಯಾಪಕ ರಾಜೇಂದ್ರ ಚೆನ್ನಿ,ಕುವೆಂಪು ವಿಶ್ವವಿದ್ಯಾನಿಲಯದ ಮಾಜಿ ಉಪ ಕುಲಪತಿ ಪ್ರೊ. ಜೋಗನ್ ಶಂಕರ್, ನಿವೃತ್ತ ಪ್ರಾಧ್ಯಾಪಕ ನಟರಾಜ್ ಬೂದಾಳು, ಪ್ರೊ. ಸುಧಾಂಶು ಭೂಷಣ್, ಪ್ರೊ. ಪ್ರಣತಿ ಪಾಂದಾ, , ಪ್ರೊ. ಎ. ನಾರಾಯಣ, ಡಾ. ವಿಪಿ ನಿರಂಜನರಾಧ್ಯ, ಡಾ. ಎಂಎಸ್ ತಳವಾರ್, ಪ್ರೊ. ಫುರ್ಕಾನ್ ಕಮರ್, ಪ್ರೊ. ಶರತ್ ಅನಂತಮೂರ್ತಿ ಡಾ. ಸಂತೋಷ್ ನಾಯಕ್ ಇದ್ದಾರೆ.
ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ (NEP) ಸಂಪೂರ್ಣವಾಗಿ ರದ್ದುಗೊಳಿಸಲಾಗುವುದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಕರ್ನಾಟಕ ರಾಜ್ಯವು ದೇಶದಲ್ಲೇ ಮೊದಲು ಕೇಂದ್ರ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಎರಡು ವರ್ಷದ ಹಿಂದೆ ಅಳವಡಿಸಿಕೊಂಡಿತ್ತು.. ಆದರೆ ಇದೀಗ ಸದರಿ ಎನ್ಇಪಿ ರದ್ದು ಮಾಡಿ, ರಾಜ್ಯ ಶಿಕ್ಷಣ ನೀತಿ ರೂಪಿಸಲು ಪ್ರಸ್ತುತ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

