![](https://kannadadunia.com/wp-content/uploads/2024/01/5f77645f-74ca-490a-be7e-ddc8cb81c521-813x1024.jpg)
ದೇವರಾಜ್ ಪುತ್ರ ಪ್ರಣಮ್ ದೇವರಾಜ್ ಅಭಿನಯಿಸಿರುವ ‘ವೈರಂ’ ಚಿತ್ರದ ”ಹರೇ ರಾಮ್” ವಿಡಿಯೋ ಹಾಡು ಇದೇ ಜನವರಿ 28ಕ್ಕೆ a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಅನುರಾಗ್ ಕುಲಕರ್ಣಿ ಈ ಹಾಡಿಗೆ ಧ್ವನಿಯಾಗಿದ್ದು, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.
ಸಾಯಿ ಶಿವಾನ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಣಂ ದೇವರಾಜ್ ಗೆ ಜೋಡಿಯಾಗಿ ಮೋನಾಲ್ ಅಭಿನಯಿಸಿದ್ದು, ಗುರುದರಂ, ಚಮಕ್ ಚಂದ್ರ, ಶಂಕರ್ ಅಶ್ವಥ್, ಮತ್ತು ವೀಣಾ ಸುಂದರ್ ತೆರೆ ಹಂಚಿಕೊಂಡಿದ್ದಾರೆ. ಮಹತಿ ಸ್ವರ ಸಾಗರ್ ಸಂಗೀತ ಸಂಯೋಜನೆ ನೀಡಿದ್ದು, ವಿಜಯಕುಮಾರ್ ಅವರ ಸಂಕಲನ ಸಮಲ ಭಾಸ್ಕರ್ ಛಾಯಾಗ್ರಹಣವಿದೆ.
![](https://kannadadunia.com/wp-content/uploads/2024/01/5f77645f-74ca-490a-be7e-ddc8cb81c521-400x504.jpg)