alex Certify ‘ಕಾಗದ’ ಚಿತ್ರದಿಂದ ಬಂತು ಅಲ್ಲಾ ಸುಭಾನಲ್ಲ ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಾಗದ’ ಚಿತ್ರದಿಂದ ಬಂತು ಅಲ್ಲಾ ಸುಭಾನಲ್ಲ ಹಾಡು

ರಂಜಿತ್ ಆಕ್ಷನ್ ಕಟ್ ಹೇಳಿರುವ ‘ಕಾಗದ’ ಚಿತ್ರದ ”ಅಲ್ಲಾ ಸುಭಾನಲ್ಲ” ಎಂಬ ವಿಡಿಯೋ ಹಾಡನ್ನು ಜಾನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಹರ್ಷ ರಂಜಿನಿ ಧ್ವನಿಯಾಗಿದ್ದು, ಪ್ರದೀಪ್ ವರ್ಮಾ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ.

ಈ ಚಿತ್ರದಲ್ಲಿ ಆದಿತ್ಯ  ಕರೆ ಗೌಡ ಹಾಗೂ ಅಂಕಿತ ಜೈರಾಮ್ ಸೇರಿದಂತೆ ನೇಹಾ ಪಾಟೀಲ್, ಬಾಲ ರಾಜವಾಡಿ, ಅಶ್ವಥ್ ನೀನಾಸಂ, ಶಿವಮಂಜು, ಗೌತಮ್ ರಾಜ್, ಸುರೇಶ್ ಬಾಬು, ಆದರ್ಶ್, ತೇಜಶ್ರೀ ಬಣ್ಣ ಹಚ್ಚಿದ್ದಾರೆ. ಅಮ್ಮ ಸಿನಿ ಕ್ರಿಯೇಶನ್ಸ್  ಬ್ಯಾನರ್ ನಡಿ ಅರುಣ್ ಕುಮಾರ್ ಎ ನಿರ್ಮಾಣ ಮಾಡಿದ್ದು, ಪವನ್ ಗೌಡ ಸಂಕಲನ, ಹಾಗೂ ವೇಣುಸ್ ನಾಗರಾಜ ಮೂರ್ತಿ ಛಾಯಾಗ್ರಹಣವಿದೆ. ಶಂಕರ್ ಜಗನ್ನಾಥ್, ವಿಮಲ್ ರಾಜ್ ಹಾಗೂ ಕೃಷ್ಣ ಹಣಗಿ ಸಹ ನಿರ್ದೇಶಕರಾಗಿ   ಕೆಲಸ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...