ಎಳ್ಳಿನಿಂದ ಹೊರತೆಗೆದ ಎಣ್ಣೆ ಎಳ್ಳೆಣ್ಣೆಗೆ ಅನಾದಿ ಕಾಲದಿಂದಲೂ ಔಷಧೀಯ ಮಹತ್ವವಿದೆ. ಹಿಂದೆ ಇದು ನೋವು ನಿವಾರಕ ಔಷಧಿಯಾಗಿಯೂ ಬಳಕೆಯಾಗುತ್ತಿತ್ತು.
ಸ್ನಾನ ಮಾಡಿ ಬಂದು ತಲೆ ಒಣಗಿಸಿಕೊಂಡ ಬಳಿಕ ನೆತ್ತಿಗೆ ಒಂದು ಚಮಚ ಎಣ್ಣೆ ಹಾಕಿಕೊಂಡರೆ ದೇಹ ತಂಪಾಗಿರುತ್ತದೆ ಹಾಗೂ ಕಣ್ಣಿನ ಬದಿಯಲ್ಲಿ ಬರುವ ಮಡ್ಡಿ ದೂರವಾಗುತ್ತದೆ.
ಚಳಿಗಾಲದಲ್ಲಿ ಕೈ, ಕಾಲು ಸೆಳೆತ ಎನ್ನುವವರು, ಮಾಯಿಶ್ಚರೈಸರ್ ಹಚ್ಚಿದರೂ ಸ್ವಲ್ಪ ಹೊತ್ತಿಗೆ ಒಣಚರ್ಮ ಹೊಂದುವವರು ಒಂದು ಚಮಚ ಎಳ್ಳೆಣ್ಣೆಯನ್ನು ಎರಡೂ ಕೈಗಳಿಂದ ಚೆನ್ನಾಗಿ ಉಜ್ಜಿ ಕೈ ಕಾಲಿಗೆ ಮಸಾಜು ಮಾಡಬೇಕು. ಇದರಿಂದ ದಿನವಿಡೀ ತ್ವಚೆ ಮೃದುವಾಗಿರುತ್ತದೆ.
ಅಡುಗೆಗೆ ಈ ಎಣ್ಣೆಯನ್ನು ಬಳಸದಿರಿ. ದೀಪದೆಣ್ಣೆಗೆ ಬಳಸುವ ಎಳ್ಳೆಣ್ಣೆ ಸೇವಿಸಲು ಅರ್ಹವಾದುದಲ್ಲ. ಹಾಗಾಗಿ ಅಡುಗೆಯ ಎಳ್ಳೆಣ್ಣೆ ಎಂದೇ ಕೇಳಿ ಖರೀದಿಸಿ.