
ಉಗುರಿನ ಬಣ್ಣ ಹೇಗೆ ನಿಮ್ಮ ಆರೋಗ್ಯದ ಲಕ್ಷಣವನ್ನು ಹೇಳುತ್ತದೆಯೋ ಅದರಂತೆ ನಾಲಗೆಯ ಬಣ್ಣವೂ ನಿಮ್ಮ ಸ್ವಾಸ್ಥ್ಯದ ಬಗ್ಗೆ ಹೇಳಬಲ್ಲದು. ಹೇಗೆನ್ನುತ್ತೀರಾ?
ಗುಲಾಬಿ ಬಣ್ಣದ ನಾಲಗೆ ಉತ್ತಮ ಆರೋಗ್ಯದ ಲಕ್ಷಣ. ಸಾಮಾನ್ಯವಾಗಿ ಜ್ವರ ಬಂದಾಗ ತುಟಿ ಹಾಗೂ ನಾಲಗೆ ಕೆಂಪು ಬಣ್ಣಕ್ಕೆ ತಿರುಗುವುದನ್ನು ನೀವು ಕಂಡಿರಬಹುದು. ಕರುಳಿನ ಭಾಗದಲ್ಲಿ ಉಷ್ಣತೆ ಹೆಚ್ಚಾದದುರ ಲಕ್ಷಣವಿದು. ಕೆಲವೊಮ್ಮೆ ನಾಲಗೆ ಕೆಂಪಿದ್ದರೆ ವಿಟಮಿನ್ ಬಿ 12 ಕೊರತೆಯ ಸಂಕೇತವೂ ಆಗಿರಬಹುದು.
ನಾಲಗೆಯ ಮೇಲೆ ಹಳದಿ ಬಣ್ಣದ ದಪ್ಪ ಪದರ ಬಂದಿದ್ದರೆ ಇದು ಹೆಚ್ಚು ತಿಂದುದರ ಲಕ್ಷಣವಾಗಿದೆ. ಇದರಿಂದ ಕೆಲವೊಮ್ಮೆ ಬಾಯಿಯ ದುರ್ವಾಸನೆ, ಜ್ವರ, ಸುಸ್ತುವಿನಂಥ ಲಕ್ಷಣಗಳು ಕಂಡು ಬಂದಾವು.
ಅತಿಯಾದ ಧೂಮಪಾನ, ಕಾಫಿ ಸೇವನೆ, ಮದ್ಯಪಾನದಿಂದ ನಾಲಿಗೆ ಹಾಗು ತುಟಿ ಕಂದು ಬಣ್ಣಕ್ಕೆ ತಿರುಗಬಹುದು. ಆ ಸಂದರ್ಭದಲ್ಲಿ ವೈದ್ಯರನ್ನು ಕಾಣಲು ಮರೆಯದಿರಿ. ನಾಲಗೆಯ ಮೇಲೆ ಮೂಡುವ ಗುಳ್ಳೆಗಳು ಉಷ್ಣ ಅಥವಾ ಅಲ್ಸರ್ ಸಮಸ್ಯೆಯ ಲಕ್ಷಣವಿರಬಹುದು. ನೇರಳೆ ಬಣ್ಣದ ನಾಲಿಗೆ ಹೃದಯ ಸಂಬಂಧಿ ಅನಾರೋಗ್ಯಗಳ ಸೂಚನೆ ನೀಡುತ್ತಿರಬಹುದು ಎನ್ನುತ್ತಾರೆ ವೈದ್ಯರು.