
ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಸಾಕಷ್ಟು ಶಾರ್ಟ್ ಫಿಲಂ ಗಳು ಬಿಡುಗಡೆಯಾಗುತ್ತಿದ್ದು, ಲವ್ ಸ್ಟೋರಿ ಕಥಾಹಂದರ ಹೊಂದಿರುವ ‘ರೋಜಸ್’ ಎಂಬ ಕಿರು ಚಿತ್ರ ಇದೆ ಅಕ್ಟೋಬರ್ 20ರಂದು ರಿಲೀಸ್ ಆಗಲಿದೆ.
ಈ ಕುರಿತು ಏಟು ಮ್ಯೂಸಿಕ್ ಸೌತ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಶಶಿಕಿರಣ್ ನಿರ್ದೇಶಿಸಿದ್ದು, ರೋಹಿತ್, ವಿನುತಾ, ಪ್ರಶಾಂತ್, ಶೈಲಜಾ ತೆರೆ ಹಂಚಿಕೊಂಡಿದ್ದಾರೆ.
ಮಾಯ ಚಿತ್ರ ಪ್ರೊಡಕ್ಷನ್ ಬ್ಯಾನರ್ ನಲ್ಲಿ ರೋಹಿತ್ ಈ ಕಿರು ಚಿತ್ರವನ್ನು ನಿರ್ಮಾಣ ಮಾಡಿದ್ದು, ಸಚಿನ್ ರಾಜೇಂದ್ರನ್ ಅವರ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನವಿದೆ. ಗಿರೀಶ್ ಹೋತೂರ್ ಮತ್ತು ರವೀಶ್ ಸಂಗೀತ ಸಂಯೋಜನೆ ನೀಡಿದ್ದಾರೆ.
