ಇತ್ತೀಚಿಗೆ ಯೂಟ್ಯೂಬ್ ನಲ್ಲಿ ಲವ್ ಸ್ಟೋರಿ, ಹಾರರ್, ಹಾಗೂ ಸೆಂಟಿಮೆಂಟ್ ಕಥೆಗಳನ್ನು ಹೊಂದಿರುವ ಕಿರು ಚಿತ್ರಗಳು ಪ್ರೇಕ್ಷಕರನ್ನು ಆಕರ್ಷಿಸುತ್ತಿವೆ. ಇದು ವ್ಯಾಲೆಂಟೈನ್ಸ್ ಡೇ ದಿನದಂದು ‘ಪ್ರೇಮ ಕದನ’ ಎಂಬ ಶಾರ್ಟ್ ಫಿಲಂ ಅನ್ನು ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ ಈ ಕಿರುಚಿತ್ರ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ರಾಘು ನಿರ್ದೇಶನದ ಈ ಕಿರು ಚಿತ್ರದಲ್ಲಿ ಶಿವರಾಜ್ ಮತ್ತು ಅಕ್ಷತಾ ಸೇರಿದಂತೆ ಮೊದಲಾದ ಕಲಾವಿದರು ಕಲಾವಿದರು ಅಭಿನಯಿಸಿದ್ದು ಅರಸ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಪ್ರಶಾಂತ್ ನಿರ್ಮಾಣ ಮಾಡಿದ್ದಾರೆ, ಮಾರುತಿ ರಾವ್ ಸಂಕಲನ ಕುಮಾರ್ ಛಾಯಾಗ್ರಹಣವಿದೆ. ರವೀಶ್ ಸಂಗೀತ ಸಂಯೋಜನೆ ನೀಡಿದ್ದಾರೆ.