
ವಿ ಶಿವಕುಮಾರ್ ನಿರ್ದೇಶನದ ‘ನಾ ನಿನಗೆ ನೀ ಎನಗೆ’ ಎಂಬ ಕಿರುಚಿತ್ರ ಇತ್ತೀಚಿಗಷ್ಟೇ ತನ್ನ ಮೆಲೋಡಿ ಹಾಡಿನ ಮೂಲಕವೇ ನೋಡುಗರ ಗಮನ ಸೆಳೆದಿದೆ. ಈ ಶಾರ್ಟ್ ಫಿಲಂ ಅನ್ನು ಇದೇ ಏಪ್ರಿಲ್ 12ಕ್ಕೆ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡುವುದಾಗಿ ನಿರ್ದೇಶಕರು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.
ಈ ಶಾರ್ಟ್ ಫಿಲಂನಲ್ಲಿ ಖುಶ್ ಮತ್ತು ‘ನೀನಾದೆನಾ’ ಧಾರಾವಾಹಿ ಖ್ಯಾತಿಯ ಖುಷಿ ಶಿವು ಅಭಿನಯಿಸಿದ್ದು, ಎಸ್ ಎಸ್ ಕೆ ಕ್ರಿಯೇಶನ್ ಬ್ಯಾನರ್ ನಲ್ಲಿ ಶಶಿಕುಮಾರ್ ಗಣೇಶ್ ನಿರ್ಮಾಣ ಮಾಡಿದ್ದಾರೆ. ಕಿರಣ್ ಕುಮಾರ್ ಸಂಕಲನ, ಸ್ವಾಮಿ ಮೈಸೂರ್ ಛಾಯಾಗ್ರಹಣ. ಭರತ್ ವೆಂಕಟಸ್ವಾಮಿ ಸಾಹಿತ್ಯ, ನಿರ್ದೇಶಕ ವಿ ಶಿವಕುಮಾರ್ ಅವರೇ ಡೈಲಾಗ್ ಬರೆದಿದ್ದಾರೆ. ತ್ಯಾಗರಾಜು ಸಂಗೀತ ಸಂಯೋಜನೆ ನೀಡಿದ್ದಾರೆ.
