
ದೇವರಾಜ್ ಎಚ್ ಆರ್ ನಿರ್ದೇಶನದ ‘ಎಕೋಸ್ ಆಫ್ ಲವ್’ ಎಂಬ ಲವ್ ಸ್ಟೋರಿ ಆಧಾರಿತ ‘ಕಿರುಚಿತ್ರ’ ನಾಳೆ ರಾಧಾ ಫಿಲಂ ಪ್ರೊಡಕ್ಷನ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಸಾಯ್ ಹಿಮೇಶ್ ಮತ್ತು ಸುಶ್ಮಿತಾ ಭಟ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಕೀರ್ತನ್ ಸಂಗೀತ ಸಂಯೋಜನೆ ನೀಡಿದ್ದಾರೆ.
ಈ ಕಿರುಚಿತ್ರದ ಹಾಡು ಇತ್ತೀಚಿಗಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಗಾನ ಪ್ರಿಯರ ಗಮನ ಸೆಳೆದಿದೆ. ವಿಕ್ರಂ ನಾಯಕ್ ಮತ್ತು ನಿಖಿಲ್ ಎಂ ಎಲ್ ಸಂಕಲನವಿದ್ದು, ಮಂಜು ಮಗನೂರು ಛಾಯಾಗ್ರಹಣವಿದೆ. ಶಿವರಾಜ್ ಮತ್ತು ದರ್ಶನ್ ಶಿಂದೆ ಡೈಲಾಗ್ ಬರೆದಿದ್ದಾರೆ. ಈ ಶಾರ್ಟ್ ಫಿಲಂ ಅನ್ನು ನಟ ಪೃಥ್ವಿ ಅಂಬಾರ್ ಬಿಡುಗಡೆ ಮಾಡಲಿದ್ದಾರೆ.
